March 16, 2026

ಹೆತ್ತವರ ಅನುಕರಣೆ ಮಕ್ಕಳಿಗೆ ಪಾಠ. ಉಸ್ಮಾನ್ ದಾರಿಮಿ: ಮದರಸ ಮಕ್ಕಳ ಶಿಕ್ಷಕ-ರಕ್ಷಕ ಸಭೆ

0
IMG-20230525-WA0006

ಬಂಟ್ವಾಳ: ಮಕ್ಕಳಿಗೆ ಅನುಕರಣೆ ಪಾಠ ಆ ಸ್ವಭಾವವನ್ನು ಮಕ್ಕಳು ಕರಗತ ಮಾಡುವುದು ಮಕ್ಕಳ ಗುಣ ಆ ಕಾರಣಕ್ಕಾಗಿ ಹೆತ್ತವರ ಸ್ವಭಾವ ಉತ್ತಮವಾಗಿರಲಿ ಎಂದು ಕಲ್ಲಡ್ಕ ಖತೀಬ್ ಉಸ್ಮಾನ್ ದಾರಿಮಿ ಅಭಿಪ್ರಾಯ ಪಟ್ಟರು. ಅವರು ಕಲ್ಲಡ್ಕ ಕೇಂದ್ರ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯ ಅಧೀನದಲ್ಲಿ ಮುನೀರುಲ್ ಇಸ್ಲಾಂ ಮದ್ರಸ ಕಲ್ಲಡ್ಕ ಆಯೋಜಿಸಿದ ಶಿಕ್ಷಕ ರಕ್ಷಕ ಸಭೆಯಲ್ಲಿ ಸಮಾರಂಭ ಉದ್ಘಾಟಿಸಿ ಮಾತಾಡುತ್ತಿದ್ದರು.. ಕಲ್ಲಡ್ಕ ಮುನೀರುಲ್ ಇಸ್ಲಾಂ ಮದ್ರಸ ಸದರ್ ಅಬ್ದುಲ್ ಲತೀಫ್ ದಾರಿಮಿ ಮಾತಾಡಿ ಪ್ರತಿಭಾವಂತ ವಿದ್ಯಾರ್ಥಿಗಳು ಮಾತ್ರ ಕಲಿಕೆಯಲ್ಲಿ ಮುಂದೆ ಬಂದಲ್ಲಿ ಕಲಿಕೆಯಲ್ಲಿ ಹಿಂದಿರುವ ವಿಧ್ಯಾರ್ಥಿಗಳು ಯಾವ ಕಾರಣಕ್ಕೂ ಹಿಂದೆ ಉಳಿಯದೆ ಅವರಿಗಾಗಿ ರಕ್ಷಕರು ಶಿಕ್ಷಕರು ವಿಶೇಷವಾದ ಬಾಗಿಲು ತರೆಯಿರಿ ಎಂದು ತಿಳಿಸಿದರು. ವೇದಿಕೆಯಲ್ಲಿ ಖಾಸಿಂ ಯಾಮಾನಿ,ಅಬ್ದುಲ್ ದಾರಿಮಿ,ಅಬ್ದುಲ್ ಮಜೀದ್ ಯಾಮಾನಿ, ಅಬ್ದುಲ್ ನಾಸಿರ್,ಸಾದಿಕ್ ಉಪಸ್ಥಿತರಿದ್ದರು,ಕಾರ್ಯದರ್ಶಿ ಅಬೂಬಕ್ಕರ್ ಸಾಹೇಬ್ ಸ್ವಾಗತಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!