March 16, 2026

ಜಾತ್ರೆಯಲ್ಲಿ ಆಟವಾಡಿ ಮನೆಗೆ ತೆರಳಿದ್ದ ಬಾಲಕ ಹಠಾತ್ ಸಾವು

0
image_editor_output_image-1227177724-1684992635217.jpg

ಚಿಕ್ಕಬಳ್ಳಾಪುರ: ಜಾತ್ರೆಯಲ್ಲಿ ಆಟವಾಡಿ ಮನೆಗೆ ತೆರಳಿದ್ದ ಬಾಲಕ ಹಠಾತ್ ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ಶಾಂತಿನಗರ ನಿವಾಸಿ ಮಂಜುನಾಥ್ ಅವರ ಪುತ್ರ ಶ್ರೇಯಸ್ (9) ಮೃತ ಬಾಲಕ. ಈತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಮುತ್ಯಾಲಮ್ಮ ಜಾತ್ರೆಗೆ ಹೋಗಿದ್ದ.

ಅಲ್ಲದೇ ಮೈದಾನದಲ್ಲಿ ವಿವಿಧ ಆಟಗಳನ್ನಾಡಿ ಮನೆಗೆ ತೆರಳಿದ್ದ. ಈ ವೇಳೆ ಆತನ ಆರೋಗ್ಯದಲ್ಲಿ ಏರುಪೇರಾಗಿದೆ.

ಕೂಡಲೇ ಆತನ ಪೋಷಕರು ಆಸ್ಪತ್ರೆಗೆ ಕರೆದೊಯ್ದರಾದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

Leave a Reply

Your email address will not be published. Required fields are marked *

error: Content is protected !!