ಸುಳ್ಯ: ಬಸ್ ಹತ್ತಲು ಓಡಿ ಬಂದ ವೇಳೆ ವ್ಯಕ್ತಿಗೆ ಬಸ್ ಢಿಕ್ಕಿ: ವ್ಯಕ್ತಿ ಮೃತ್ಯು
ಸುಳ್ಯ: ಬಸ್‌ಗೆ ಹತ್ತಲೆಂದು ಓಡಿ ಬಂದ ಸಂದರ್ಭ ಆಯ ತಪ್ಪಿ ಬಸ್ ಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ನಿನ್ನೆ ಸುಳ್ಯದ ಏನೆಕಲ್ ನಲ್ಲಿ ವರದಿಯಾಗಿದೆ.
ಏನೆಕಲ್ಲು ಗ್ರಾಮದ ಮುತ್ತಾಜೆಯ ಚೆನ್ನಪ್ಪ ಗೌಡ ಮೃತಪಟ್ಟವರು. ಪಂಜಕ್ಕೆ ಹೋಗಲೆಂದು ಏನೆಕಲ್ ನ ಬಸ್ ಸ್ಟ್ಯಾಂಡ್ ನ ಒಂದು ಬದಿಯಲ್ಲಿ ನಿಂತಿದ್ದರು. ಸುಬ್ರಹ್ಮಣ್ಯದಿಂದ ಪುತ್ತೂರಿಗೆ ಹೋಗುವ ಬಸ್ ಬಂದಾಗ ಬಸ್ ಸ್ಟ್ಯಾಂಡ್ ಕಡೆಗೆ ಓಡಿದಾಗ ಬಸ್ ಡಿಕ್ಕಿ ಹೊಡೆಯಿತು.
ಡಿಕ್ಕಿಯ ರಭಸಕ್ಕೆ ಚೆನ್ನಪ್ಪರವರು ರಸ್ತೆಯ ಮಧ್ಯದಲ್ಲೇ ಬಿದ್ದು ಹೊರಳಾಡಿದ್ದಾರೆ. ಕೂಡಲೇ ಅಲ್ಲಿ ಸೇರಿದ್ದವರು ಹೆಚ್ಚಿನ ಚಿಕಿತ್ಸೆಗೆಂದು ಕಡಬ ಆಸ್ಪತ್ರೆಗೆ ಕರೆದೊಯ್ಯವ ವೇಳೆಗೆ ಅವರು ಮೃತಪಟ್ಟರೆಂದು ತಿಳಿದುಬಂದಿದೆ.




