July 3, 2026

ಚಿಕ್ಕಮಗಳೂರು: ಭದ್ರಾ ಡ್ಯಾಂ ಪಕ್ಕದ ಕಾಲುವೆಯಲ್ಲಿ ಮುಳುಗಿ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರು ಸೇರಿ ಮೂವರ ಸಾವು

0
image_editor_output_image-1878451986-1684820787296.jpg

ಚಿಕ್ಕಮಗಳೂರು: ಕಾಲುವೆಯಲ್ಲಿ ಮುಳುಗಿ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರು ಸೇರಿದಂತೆ ಮೂವರ ಸಾವನ್ನಪ್ಪಿದ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಭದ್ರಾ ಡ್ಯಾಂ ಪಕ್ಕದ ಕಾಲುವೆಯಲ್ಲಿ ನಡೆದಿದೆ.

ಸಾವನ್ನಪ್ಪಿದವರನ್ನು 31 ವರ್ಷ ಪ್ರಾಯದ ರವಿ, 17 ವರ್ಷ ಪ್ರಾಯದ ಅನನ್ಯ ಮತ್ತು 16 ವರ್ಷ ಪ್ರಾಯದ ಶಾಮವೇಣಿ ಎಂದು ಗುರುತಿಸಲಾಗಿದೆ.

ನೀರಿನಲ್ಲಿ ಆಟವಾಡುವ ಸಂದರ್ಭದಲ್ಲಿ ಆಯ ತಪ್ಪಿ ಹೊಂಡಕ್ಕೆ ಬಿದ್ದು ಈ ಮೂವರು ಸಾವು ಕಂಡಿದ್ದಾರೆ.

ಒಬ್ಬರ ರಕ್ಷಣೆಗೆ ಮತ್ತೊಬ್ಬರು ಹೋಗಿ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ರವಿ ಮೂಲತಃ ಲಕ್ಕವಳ್ಳಿ ನಿವಾಸಿ, ಅನನ್ಯ, ಶಾಮವೇಣಿ ಅವರು ರವಿ ಅವರ ಸಹೋದರಿಯರ ಮಕ್ಕಳು.

ಅನನ್ಯ ಮೂಲತಃ ಶಿವಮೊಗ್ಗ ಹಾಗೂ ಶಾಮವೇಣಿ ನಂಜನಗೂಡಿನವಳು ಎಂದು ಗೊತ್ತಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!