August 18, 2026

ನಮ್ಮನ್ನು ಜೈಲಿಗೆ ಹಾಕ್ತಾರೋ, ನೇಣಿಗೆ ಹಾಕ್ತಾರೋ ವಂದೇ ಮಾತರಂನ ಎರಡು ಪ್ಯಾರಾವನ್ನಷ್ಟೇ ಹಾಡುವುದು: ಬಿ.ಕೆ ಹರಿಪ್ರಸಾದ್

0
image_editor_output_image1289240458-1787045712781

ದೆಹಲಿ: ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ನ ಎರಡು ಚರಣಗಳನ್ನಷ್ಟೇ ಹಾಡುವುದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ. ಇದು ಪಕ್ಷದ ನಿರ್ಧಾರಕ್ಕೆ ಅನುಗುಣವಾಗಿರಲಿದೆ ಎಂದು ಅವರು ಹೇಳಿದ್ದಾರೆ.

ಇಂದು ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ ಕೆ ಹರಿಪ್ರಸಾದ್, ಸರ್ಕಾರ ಈ ಕುರಿತು ಕಾನೂನು ರೂಪಿಸಿರಬಹುದು, ಆದರೆ ಕೆಪಿಸಿಸಿ ಅಧ್ಯಕ್ಷನಾಗಿ, 1896ರಿಂದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲಿ ಸಾಂಪ್ರದಾಯಿಕವಾಗಿ ಹಾಡುತ್ತಾ ಬಂದಿರುವ ವಂದೇ ಮಾತರಂನ ಎರಡು ಚರಣಗಳನ್ನಷ್ಟೇ ನಾವು ಹಾಡುವುದನ್ನು ಮುಂದುವರಿಸಿಕೊಂಡು ಹೋಗುವುದು ಎಂದರು.

ನಮ್ಮನ್ನು ಜೈಲಿಗೆ ಹಾಕ್ತಾರೋ, ನೇಣಿಗೆ ಹಾಕ್ತಾರೋ ವಂದೇ ಮಾತರಂನ ಎರಡು ಪ್ಯಾರಾವನ್ನಷ್ಟೇ ಹಾಡುವುದು, ಹಾಡಿನ ಬಗ್ಗೆ ನಮ್ಮ ವಿರೋಧವಿಲ್ಲ, ಆದರೆ ಎರಡು ಪ್ಯಾರ ಮಾತ್ರ ಹೇಳೋಕೆ ಆಗೋದು, ಪೂರ್ಣವಾಗಿ ಯಾವ ಕಾರ್ಯಕ್ರಮದಲ್ಲಿಯೂ ಹಾಡುವುದಿಲ್ಲ ಎಂದರು.

ಪಕ್ಷದ ಕಾರ್ಯಕ್ರಮಗಳಲ್ಲಿ ನಾವು ಸಂಪೂರ್ಣ ಹಾಡನ್ನು ಹಾಡುವುದಿಲ್ಲ. ಇದು ನಮ್ಮ ನಿರ್ಧಾರ ಎಂದರು. ಕಾಂಗ್ರೆಸ್ ಸರ್ಕಾರವೂ ಇದೇ ಪದ್ಧತಿಯನ್ನು ಅನುಸರಿಸಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಇದು ಕಾಂಗ್ರೆಸ್ ನೇತೃತ್ವದ ಸರ್ಕಾರವಾದರೂ, ಜನರಿಂದ ಆಯ್ಕೆಯಾದ ಸರ್ಕಾರ. ಅದು ಕಾನೂನಿಗೆ ಬದ್ಧವಾಗಿದೆ. ಕಾನೂನು ರೂಪಿಸಿದ್ದರೆ, ಸರ್ಕಾರ ಅದನ್ನು ಪಾಲಿಸಲೇಬೇಕು ಎಂದು ಹೇಳಿದರು

Leave a Reply

Your email address will not be published. Required fields are marked *

error: Content is protected !!