ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಕ್ರೈಂ ಬ್ರಾಂಚ್ ಘಟಕಕ್ಕೆ ಸೇರ್ಪಡೆ
ಮುಂಬೈ: ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಅವರನ್ನು ಮುಂಬೈ ಅಪರಾಧ ವಿಭಾಗದ 9 ನೇ ಘಟಕಕ್ಕೆ ನಿಯೋಜಿಸಲಾಗಿದೆ.
ಮಾರ್ಚ್ 28 ರಂದು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದಿಂದ (ಎಟಿಎಸ್) ಮುಂಬೈ ಪೊಲೀಸರಿಗೆ ವರ್ಗಾವಣೆಗೊಂಡ ಅವರು ಇದೀಗ ಮತ್ತೆ ಮುಂಬಯಿ ಕ್ರೈಂ ಬ್ರ್ಯಾಂಚ್‌ಗೆ ಸೇರ್ಪಡೆಗೊಂಡಿದ್ದಾರೆ. ಅವರು ಮಹಾರಾಷ್ಟ್ರ ಎಟಿಎಸ್‌ನಲ್ಲಿ 3 ವರ್ಷಗಳ ಸೇವಾವಧಿಯನ್ನು ಪೂರ್ಣಗೊಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ದಯಾ ನಾಯಕ್, ಮಹಾರಾಷ್ಟ್ರ ಎಟಿಎಸ್‌ನಲ್ಲಿ 3 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ಅನಂತರ ಮುಂಬಯಿ ಕ್ರೈಂ ಬ್ರ್ಯಾಂಚ್‌ಗೆ ಸೇರಿದ್ದೇನೆ. ಎಲ್ಲರ ನಿರೀಕ್ಷೆಗಳನ್ನು ಈಡೇರಿಸಲು ಮತ್ತು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸಲು ಬದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ.




