July 3, 2026

ಮದುವೆ ಮಂಟಪದಲ್ಲೇ ವಿಷ ಸೇವಿಸಿದ ವಧು-ವರ

0
image_editor_output_image360552066-1684388926830.jpg

ಇಂದೋರ್:‌ ವಿವಾಹ ಸಮಾರಂಭದಲ್ಲಿ ವಧು – ವರ ವಿಷ ಸೇವಿಸಿರುವ ಘಟನೆ ಮಧ್ಯ ಪ್ರದೇಶದ ಇಂದೋರ್‌ ನಲ್ಲಿ ನಡೆದಿರುವುದು ವರದಿಯಾಗಿದೆ.

ಮಂಗಳವಾರ( ಮೇ.16 ರಂದು) ಕನಾಡಿಯಾ ಪ್ರದೇಶದ ಆರ್ಯ ಸಮಾಜ ದೇವಸ್ಥಾನದಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮದಲ್ಲಿ ವಧು ವರರ ನಡುವೆ ವಾಗ್ವಾದ ಉಂಟಾಗಿದೆ.

ಇನ್ನೇನು ಹಾರ ಬದಲಾಯಿಸಿ ತಾಳಿ ಕಟ್ಟಬೇಕು ಎನ್ನುವಾಗಲೇ ವರ ಮದುವೆ ವೇದಿಕೆಯ ಬದಿಗೆ ಹೋಗಿದ್ದಾನೆ. ಆ ಬಳಿಕ ಮದುವೆ ವೇದಿಕೆಯಲ್ಲಿ ತಾನು ವಿಷ ಸೇವಿಸಿ ಬಂದಿದ್ದೇನೆ ಎಂದು ವರ ದೀಪಕ್ ಅಹಿರ್ವಾರ್ ವಧು ನಿಶಾಳಿಗೆ ಹೇಳಿದ್ದಾನೆ. ವರನ ಮಾತನ್ನು ಕೇಳಿ ವಧು ಕೂಡ ವಿಷ ಸೇವಿಸಿದ್ದಾಳೆ.

ಗಂಭೀರ ಸ್ಥಿತಿಯಲ್ಲಿ ಇಬ್ಬರನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ವರ ಮೃತಪಟ್ಟಿದ್ದು, ವಧು ಜೀವನ್ಮರಣದ ಹೋರಾಟ ಮಾಡುತ್ತಿದ್ದಾಳೆ. ಆಕೆಯನ್ನು ವೆಂಟಿಲೇಟರ್ ನಲ್ಲಿ ಇಡಲಾಗಿದೆ ಎಂದು ವರದಿ ತಿಳಿಸಿದೆ

Leave a Reply

Your email address will not be published. Required fields are marked *

You may have missed

error: Content is protected !!