August 12, 2026

ವಿಟ್ಲ: ಚಿಕನ್ ಅಂಗಡಿಯಿಂದ ಚೂರಿ ತಂದು ಯುವಕನಿಗೆ ಇರಿದ ವ್ಯಕ್ತಿ: ಅಬೂಬಕ್ಕರ್ ಸಿದ್ದೀಕ್ ವಿರುದ್ಧ ಪ್ರಕರಣ ದಾಖಲು

0
IMG-20230515-WA0052.jpg

ವಿಟ್ಲ: ಚಿಕನ್ ಅಂಗಡಿಯಿಂದ ಚೂರಿ ತಂದು ಯುವಕನಿಗೆ ಇರಿದು ಹಲ್ಲೆ ನಡೆಸಿರುವ ಘಟನೆ ವಿಟ್ಲದಲ್ಲಿ ನಡೆದಿದ್ದು, ಆರೋಪಿಯ ವಿರುದ್ದ ಪ್ರಕರಣ ದಾಖಲಾಗಿದೆ.

ಅಬೂಬಕ್ಕರ್ ಸಿದ್ದೀಕ್ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಬೂಬಕ್ಕರ್ ಸಿದ್ದಿಕ್ ಎಂಬಾತನು ಮಕ್ಕಳು ಎದುರು ಸಿಗರೇಟ್ ಸೇದುವ ವಿಚಾರದಲ್ಲಿ ಅಬ್ದುಲ್‌ ಅಜೀಜ್‌ ಆಕ್ಷೇಪಿಸಿದಕ್ಕೆ ಜಗಳವಾಗಿದ್ದು, ಭಾನುವಾರದಂದು ಅಬ್ದುಲ್‌ ಅಜೀಜ್‌ ಮನೆಯಲ್ಲಿರುವ ಸಮಯ ಅಬೂಬಕ್ಕರ್ ಸಿದ್ದಿಕ್ ನು ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕ ದಲ್ಲಿರುವ ಅಬ್ದುಲ್ ಕರೀಂ ರವರ ಬದ್ರಿಯಾ ಚಿಕಿನ್ ಸೆಂಟರ್ ಅಂಗಡಿಯ ಬಳಿಗೆ ಬರಲು ತಿಳಿಸಿದ ಮೇರೆಗೆ ಅಬ್ದುಲ್‌ ಅಜೀಜ್‌ ಮೇಲ್ಕಾಣಿಸಿದ ಸ್ಥಳಕ್ಕೆ ಬಂದಾಗ ಅಬೂಬಕ್ಕರ್ ಸಿದ್ದಿಕ್ ನು ಅಜೀಜ್ ಅವರಿಗೆ ಅವಾಶ್ಯ ಶಬ್ದದಿಂದ ಬೈದು, ಚಿಕನ್ ಸೆಂಟರ್ ನಲ್ಲಿದ್ದ ಚೂರಿಯನ್ನು ಹಿಡಿದುಕೊಂಡು ಬಂದು ಅಬ್ದುಲ್‌ ಅಜೀಜ್‌ ಅವರ ಎದೆಯ ಕೆಳಗೆ ಹೊಟ್ಟೆಯ ಭಾಗಕ್ಕೆ ಚುಚ್ಚಿದಾಗ ಚಿಕನ್ ಸೆಂಟರ್ ನಲ್ಲಿದ್ದ ಅಬ್ದುಲ್ ಕರೀಂ, ಜಲೀಲ್ ಮತ್ತು ಹಿಶಾಮ್ ರವರು ಅಬೂಬಕ್ಕರ್ ನನ್ನು ಹೊಡೆಯದಂತೆ ತೆಗೆದಾಗ, ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಓಡಿ ಹೋಗಿದ್ದು, ಬಳಿಕ ಹಲ್ಲೆಯಿಂದ ಗಾಯಗೊಂಡ ಅಬ್ದುಲ್‌ ಅಜೀಜ್‌ ಅವರನ್ನು ಜಲೀಲ್‌ ಕಾರೊಂದರಲ್ಲಿ ವಿಟ್ಲ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈಧ್ಯರು ಪರೀಕ್ಷೀಸಿ ಒಳರೋಗಿಯಾಗಿ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!