March 16, 2026

ವಿಟ್ಲ: ಚಿಕನ್ ಅಂಗಡಿಗೆ ನುಗ್ಗಿ ದಾಂಧಲೆ:
ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ

0
fir-crpc-154-1.jpg

ವಿಟ್ಲ: ಚಿಕನ್ ಸೆಂಟರ್ ನಲ್ಲಿ ಕೆಲಸ ಮಾಡಿಕೊಂಡಿರುವಾಗ ಬಂದ ನಾಲ್ವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.

ಕೇಪು ಮರಕ್ಕಿಣಿ ನಿವಾಸಿ ಅಬೂಬಕ್ಕರ್ ಸಿದ್ಧಿಕ್ (27) ಎಂಬವರು ನೀಡಿದ ದೂರಿನ ಮೇರೆಗೆ ಅಪ್ರಾಝ್‌ (ಅಜೀಜ್‌) ಜಲೀಲ್‌, ಇಶಾಮ್‌, ಫರ್‌ಹಾನ್‌ ರವರ ವಿರುದ್ಧ ಠಾಣೆಗೆ ದೂರು ನೀಡಿದ್ದಾರೆ.

ಅಬೂಬಕ್ಕರ್‌ ಸಿದ್ದೀಕ್‌ ರವರು ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕ ಬದ್ರಿಯಾ ಚಿಕನ್‌ ಸೆಂಟರ್‌ನಲ್ಲಿ ಕೆಲಸ ಮಾಡಿಕೊಂಡಿರುವಾಗ ಅಪ್ರಾಝ್‌ ಅಜೀಜ್‌, ಜಲೀಲ್‌, ಇಶಾಮ್‌ ಹಾಗೂ ಫರ್‌ಹಾನ್‌ ರವರು ಅಕ್ರಮ ಪ್ರವೇಶ ಮಾಡಿದ್ದು, ಆರೋಪಿತರ ಪೈಕಿ ಅಪ್ರಾಝ್‌ (ಅಜೀಜ್‌) ಎಂಬಾತನು ಗಾಂಜಾ ಸೇದುವ ವಿಚಾರವನ್ನು ಸಿದ್ದೀಕ್‌ ರವರು ಬೇರೆಯವರಲ್ಲಿ ಹೇಳಿರುತ್ತಾರೆ ಎಂಬ ತಪ್ಪು ಕಲ್ಪನೆಯಿಂದ ಸಿದ್ದೀಕ್‌ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದಿದ್ದು, ಜೊತೆಗಿದ್ದವರು ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಕಲಂ:448, 504, 323, 324, 506 ಜೊತೆಗೆ 34 ಬಾಧಂಸಂ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!