July 13, 2026

ಪಾಕಿಸ್ತಾನದಿಂದ ಡ್ರೋನ್ ಮೂಲಕ ಡ್ರಗ್ಸ್ ಮಾರಾಟ: ಮೂವರು ಆರೋಪಿಗಳ ಬಂಧನ

0
image_editor_output_image107864778-1683881624298.jpg

ನವದೆಹಲಿ: ಪಾಕಿಸ್ತಾನದಿಂದ ಡ್ರೋನ್ ಮೂಲಕ ಡ್ರಗ್ಸ್ ತರಿಸಿ ಮಾರಾಟ ದಂಧೆಯಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ದೆಹಲಿ ವಿಶೇಷ ಗುಪ್ತಚರ ದಳ ಶುಕ್ರವಾರ ಬಂಧಿಸಿದೆ.

ಆರೋಪಿಗಳನ್ನು ಪಂಜಾಬ್ ಮೂಲದ ಮಲ್ಕಿತ್ ಸಿಂಗ್, ಧಮೇರ್ಂದ್ರ ಸಿಂಗ್ ಮತ್ತು ಹರ್ಪಾಲ್ ಸಿಂಗ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಪಾಕಿಸ್ತಾನದ ಡ್ರಗ್ಸ್ ದಂಧೆಕೋರರಿಗೆ ಹವಾಲಾ ಜಾಲದ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದರು. ಪ್ರತಿಯಾಗಿ ಡ್ರೋನ್‍ಗಳ ಮೂಲಕ ಡ್ರಗ್ಸ್ ಪಡೆಯುತ್ತಿದ್ದರು. ನಂತರ ಪಂಜಾಬ್ ಮತ್ತು ಇತರ ರಾಜ್ಯಗಳಿಗೆ ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!