ವಿಧಾನಸಭೆಯ ಚುನಾವಣೆಯ ಫಲಿತಾಂಶ: ನಿಖರವಾಗಿ ಭವಿಷ್ಯ ಹೇಳುವ ಜ್ಯೋತಿಷಿಗಳಿಗೆ 10 ಲಕ್ಷ ರೂ ಬಹುಮಾನ
ಮಂಗಳೂರು: ವಿಧಾನಸಭೆಯ ಚುನಾವಣೆಯ ಫಲಿತಾಂಶದ ನಿಖರವಾಗಿ ಭವಿಷ್ಯ ನುಡಿದು ಅವರ ಹೇಳಿಕೆ, ಲೆಕ್ಕಾಚಾರ ಸರಿಯಾದರೆ ಅಂತಹ ಜ್ಯೋತಿಷಿಗಳಿಗೆ 10 ಲಕ್ಷ ರೂಪಾಯಿ ಬಹುಮಾನವನ್ನು ನೀಡುವುದಾಗಿ ಖ್ಯಾತ ವಿಚಾರವಾದಿ ಪ್ರೊ.ನರೇಂದ್ರ ನಾಯಕ್ ಜ್ಯೋತಿಷಿಗಳಿಗೆ ನೇರ ಸವಾಲು ಹಾಕಿದ್ದಾರೆ.
ಈಗಾಗಲೇ 20ಕ್ಕೂ ಹೆಚ್ಚು ಜ್ಯೋತಿಷಿಗಳು ಅಂಚೆ ಮೂಲಕ ಫಲಿತಾಂಶದ ಉತ್ತರ ಬರೆದು ಕಳುಹಿಸಿದ್ದಾರೆ ಎಂದು ಅವರು ತಿಳಿಸಿದರು .




