March 16, 2026

ಅಲ್-ಅಮೀನ್ ಯೂತ್ ಫೆಡರೇಷನ್ ಸಂಸ್ಥೆಯಿಂದ ಕೊಡಂಗಾಯಿ ಮದ್ರಸ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

0
IMG-20230508-WA0064.jpg

ಕೊಡಂಗಾಯಿ: ಕಳೆದ ಹಲವಾರು ವರ್ಷಗಳಿಂದ ಧಾರ್ಮಿಕ ಹಾಗೂ ಸಾಮಾಜಿಕ ರಂಗದಲ್ಲಿ ಸಕ್ರಿಯವಾಗಿ ಕಾರ್ಯಾಚರಿಸುತ್ತಿರುವ “ವಿಶೇಷವಾಗಿ ಕಲಿಯುವಿಕೆಗೆ ಹೆಚ್ಚು ಪ್ರಾಧಾನ್ಯ ನೀಡುತ್ತಾ ಬಂದಿರುವ” ಕೊಡಂಗಾಯಿಯ ಅಲ್-ಅಮೀನ್ ಯೂತ್ ಫೆಡರೇಷನ್(ರಿ) ಇದರ ವತಿಯಿಂದ ಮುಹ್ಯುದ್ದೀನ್ ಜುಮಾ ಮಸ್ಜಿದ್ ಕೊಡಂಗಾಯಿ ಇದರ ಅಧೀನದಲ್ಲಿರುವ
“ಸಿರಾಜುಲ್ ಇಸ್ಲಾಂ ಮದ್ರಸ,ಮದ್ರಸತ್ತುನ್ನೂರಿಯ ಕೊಡಂಗಾಯಿ,ಶಂಸುಲ್ ಹುದಾ ಮದ್ರಸ ರಾಧುಕಟ್ಟೆ ಕೊಡಂಗಾಯಿ” ಇದರ 1 ರಿಂದ 8 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಜರಗಿತು‌.

ಕಾರ್ಯಕ್ರಮದಲ್ಲಿ ಜಮಾಅತ್ ಖತೀಬರಾದ ಉಸ್ತಾದ್ ಅಬೂಬಕ್ಕರ್ ಸಿದ್ದಿಕ್ ಅರ್ಶದಿ, ಮದ್ರಸ ಅಧ್ಯಾಪಕರಾದ ಮಹಮೂದ್ ಮುಸ್ಲಿಯಾರ್, ಆದಂ ಮುಸ್ಲಿಯಾರ್, ಜಮಾಹತ್ ಅಧ್ಯಕ್ಷರಾದ ಎ.ಎಂ ಮಹಮ್ಮದ್ ಕುಂಞ, ಶಾಹುಲ್ ಹಮೀದ್ ಕುಕ್ಕಿಲ(pwd ಕಂಟ್ರಾಕ್ಟರ್), ಅಬ್ದುಲ್ ಕುಂಞ ಮಾಡಾವು, ಹಾಗೂ ಸಮಿತಿ ಕೋಶಾಧಿಕಾರಿ ಅಬ್ದುಲ್ ಮಜೀದ್ ಟಿ ಎಂ, ಪ್ರದಾನ ಕಾರ್ಯದರ್ಶಿ ಶರೀಫ್ ಎಂ ಕಾರ್ಯಕಾರಿ ಸಮಿತಿ ಸದಸ್ಯರಾದ ರಝಕ್ ಎಂ.ಕೆ, ಉಮ್ಮರ್ ಕೆ, ಹಾಗೂ ಫಲಾನುಭವಿಗಳಾದ ಎಲ್ಲಾ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.

ಎಂ ಕೆ ರಝ್ಹಾಕ್ ಸ್ವಾಗತಿಸಿ, ಮಜೀದ್ ಟಿ ಎಂ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!