December 3, 2024

ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರ ಮೇಲೆ ಹಲ್ಲೆ: ಕೂದಲೆಳೆ ಅಂತರದಲ್ಲಿ ಮಂಡಲದ ಅಧ್ಯಕ್ಷರನ್ನು ಪಾರು ಮಾಡಿದ ಪುತ್ತೂರಿನ ಅಕ್ಷಯ್ ರೈ ದಂಬೆಕಾನ

0

ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಈ ಹಿಂದೆ ಬಹಳ ಅಪಾಯಕಾರಿ ಕ್ಷೇತ್ರವಾಗಿತ್ತು. ಇಲ್ಲಿ ರೌಡಿಸಂ ತಾಂಡವವಾಡುತ್ತಿದೆ. ಈ ಕ್ಷೇತ್ರದ ಪಕ್ಷದ ಜವಾಬ್ದಾರಿಯನ್ನು ವಹಿಸಿ ಗುಜರಾತ್ ನ ಚೀಫ್ ವಿಪ್ ಹಾಗೂ ಶಾಸಕರಾದ ಕೌಶಿಕ್ ಭಾಯ್ ಪ್ರಭಾರಿಯಾಗಿ ಬಂದಿರುತ್ತಾರೆ. ಇವರೊಂದಿಗೆ ಬಿಜೆಪಿ ಯುವ ಮೋರ್ಚಾ ರಾಜ್ಯ ಮಾಧ್ಯಮ ಇಂಚಾರ್ಜ್ ಅಕ್ಷಯ್ ರೈ ದಂಬೆಕಾನ ಕೂಡ ಇವರೊಂದಿಗೆ ಈ ಕ್ಷೇತ್ರದಲ್ಲಿ ಜವಾಬ್ದಾರಿ ವಹಿಸಿ ಕೆಲಸ ಮಾಡುತ್ತಿದ್ದಾರೆ.

ನಿನ್ನೆ ನಡೆದಂತಹ ಘಟನೆಯಲ್ಲಿ ಕ್ಷೇತ್ರದ ಅಧ್ಯಕ್ಷ ಸೂರೆನಹಳ್ಳಿ ಶ್ರೀನಿವಾಸ್ ರವರು ಮಧ್ಯಾಹ್ನ ಹಾಗೂ ಸಂಜೆ ವೇಳೆ ಸುಮಾರು ಹತ್ತು ಸಾವಿರಕ್ಕೂ ಅಧಿಕ ಯಾದವ ಹಾಗೂ ಮಾದಿಗ ಸಮುದಾಯದವರನ್ನು ಸೇರಿಸಿ ಸಮಾವೇಶವನ್ನು ನಡೆಸುತ್ತಿದ್ದರು. ಈ ಸಮಾವೇಶದಲ್ಲಿ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ಕೇಂದ್ರ ಸಚಿವ ನಾರಾಯಣ ಸ್ವಾಮಿಯವರು ಮುಖ್ಯ ಭಾಷಣಕಾರರಾಗಿ ಸಭೆಯಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮ ಆಯೋಜಿಸಿದರಿಂದ ಉಳಿದ ಎಲ್ಲಾ ಪಕ್ಷದ ಮುಖಂಡರಿಗೆ ಭಯ ಉಂಟಾಗಿದ್ದು ಖಂಡಿತವಾಗಿಯೂ ಬಿಜೆಪಿ ಗೆಲ್ಲುತ್ತದೆ ಎಂಬ ಸಂದೇಶ ರವಾನೆ ಆದ ಬಳಿಕ ಅದೇ ದಿನ ಸಂಜೆ ನಾಯಕ ನಟ ಕಿಚ್ಚ ಸುದೀಪ್ ರವರು ಬಿಜೆಪಿ ಪಕ್ಷದ ಮತಯಾಚನೆಗೆ ಬರುವ ಕಾರ್ಯಕ್ರಮವು ರದ್ದು ಆಗಿರುತ್ತದೆ. ಆ ಕಾರ್ಯಕ್ರಮವನ್ನು ಮೇ 8ಕ್ಕೆ ಬೆಳಗ್ಗೆ ಆಯೋಜಿಸುವುದಾಗಿ ಪಕ್ಷ ತೀರ್ಮಾನಿಸುತ್ತಾರೆ.

ಈ ಎಲ್ಲಾ ಚಿತ್ರಣಗಳನ್ನು ತಿಳಿದ ಕೆಲವು ಕಿಡಿಗೇಡಿಗಳು ಇವರ ಮೇಲೆ ದಾಳಿಯನ್ನು ನಡೆಸುವ ಮೂಲಕ ಈ ಕೃತ್ಯವನ್ನು ಎಸಗಿರುತ್ತಾರೆ. ಈ ಸಂದರ್ಭದಲ್ಲಿ ಇವರೊಂದಿಗೆ ಅದೇ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಆ ದಿನ ಪೂರ್ತಿ ಐತಿಹಾಸಿಕ ರೀತಿಯಲ್ಲಿ ಮನೆ ಮನೆ ಭೇಟಿ ಹಾಗೂ ಬಿಜೆಪಿಯ ಕಾರ್ಯಕರ್ತರು ಮತ ಪ್ರಚಾರ ಮಾಡಿದ ಬಾಲಕ್ಕ ಮಾದಿಗ ಸಮಾಜ ಕಾಲೋನಿಗಳಿಗೆ ಭೇಟಿ ನೀಡಿ ಹಿಂತಿರುಗುವ ವೇಳೆ ಈ ಘಟನೆ ನಡೆದಿರುತ್ತದೆ. ಈ ಸಂದರ್ಭದಲ್ಲಿ ಅವರ ಜೊತೆಗೆ ಇದ್ದ ಬಿಜೆಪಿ ಯುವ ಮೋರ್ಚಾದ ಅಕ್ಷಯ್ ರೈ ದಾಂಬೆಕಾನ ರವರು ಅವರ ಹಿಂಬದಿಯ ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಘಟನೆ ನಡೆದಿದೆ. ಕೂಡಲೇ ಅಧ್ಯಕ್ಷ ಸೂರೇನಹಳ್ಳಿ ಶ್ರೀನಿವಾಸ್ ರವರನ್ನು ಕೂದಲೆಲೆ ಅಂತರದಲ್ಲಿ ಪಾರು ಮಾಡಿದ್ದಾರೆ.

ಈ ಪ್ರಕರಣ ತುರನೂರು ಠಾಣೆಯಲ್ಲಿ ದಾಖಲಾಗಿದೆ. ಈ ಘಟನೆಯ ಬಗ್ಗೆ ಇಂದು ತುರನೂರು ಮತ್ತು ಚಳ್ಳಕೆರೆ ಪೆಟೆಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಮೌನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!