July 13, 2026

ವಿಟ್ಲ : ಕನ್ಯಾನ ಜಂಕ್ಷನ್ ನಿಂದ ಬೈಕ್ ಕಳವು: ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯ ಸೆರೆ

0
close-up-man-preparing-steal-motorcycle_23-2149133037.jpg

ವಿಟ್ಲ : ಕನ್ಯಾನ ಗ್ರಾಮದ ಪಂಜಾಜೆ ನಿವಾಸಿ, ಉದಯವಾಣಿ ಪತ್ರಿಕಾ ಏಜೆಂಟ್ ಗಂಗಾಧರ ಕನ್ಯಾನ ಅವರ ಬೈಕ್ ಕಳವಾಗಿದೆ. ಅವರು ಕನ್ಯಾನ ಜಂಕ್ಷನ್ ನಲ್ಲಿ ಬೈಕ್ ಇಟ್ಟು ಗೆಳೆಯರ ಜತೆ ಮಾತನಾಡುತ್ತ ಸಮೀಪದ ಅಂಗಡಿಗೆ ತೆರಳಿ ಹಿಂದಿರುಗುತ್ತಿದ್ದಾಗ ಬೈಕ್ ನಾಪತ್ತೆಯಾಗಿತ್ತು.

ಸುತ್ತಮುತ್ತ ಹುಡುಕಾಡಿದಾಗ ಬೈಕ್ ಪತ್ತೆಯಾಗಲಿಲ್ಲ. ಸಿಸಿಟಿವಿ ಫೂಟೇಜನ್ನು ನೋಡಿದಾಗ ಟೀಶರ್ಟ್ ಧರಿಸಿದ ವ್ಯಾಕ್ತಿ ಬೈಕನ್ನು ಕನ್ಯಾನ ಮುಡಿಪು ರಸ್ತೆಯಲ್ಲಿ ಒಯ್ಯುವುದು ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!