February 4, 2026

ವಿಟ್ಲ: ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರ ಬೃಹತ್ ರೋಡ್ ಶೋ: ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿ

0
IMG-20230504-WA0048.jpg

ವಿಟ್ಲ: ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ವಿಟ್ಲದಲ್ಲಿ ಬೃಹತ್ ರೋಡ್ ಶೋ ನಡೆಯಿತು.

ಮೊದಲಿಗೆ ಅರುಣ್ ಕುಮಾರ್ ಪುತ್ತಿಲ ಅವರು ವಿವಿಧ ಧಾರ್ಮಿಕ ಕ್ಷೇತದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ವಿಟ್ಲದ ಜೈನ ಬಸದಿಯಿಂದ ಅಪಾರ ಕಾರ್ಯಕರ್ತ ರ ನೇತೃತ್ವದಲ್ಲಿ ರೋ ಶೋ ಹೊರಟು, ಮುಖ್ಯ ರಸ್ತೆಯಲ್ಲಿ ಸಂಚರಿಸಿ, ಅರಮನೆಯ ಮೈಮೆ ಗದ್ದೆಯಲ್ಲಿ ಸಭೆ ನಡೆಯಿತು.

ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಆರ್.ಎಸ್.ಎಸ್. ಹಿರಿಯರ, ಮಠಾಧೀಶರ, ಕಾರ್ಯಕರ್ತರ ಆಶಯದಂತೆ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಹಿಂದುತ್ವದ ಹೆಸರಿನಲ್ಲಿ ಸ್ಪರ್ಧೆಗೆ ಇಳಿದಿದ್ದೇನೆ ಎಂದ ಅವರು, ಸೌಮ್ಯ ಭಟ್, ಅಕ್ಷತಾ ಕೊಲೆ ಪ್ರಕರಣ, ಪ್ರವೀಣ್ ನೆಟ್ಟಾರು ಹತ್ಯೆ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತದೆ ಎಂದು ಸ್ಮರಿಸಿಕೊಂಡರು.

ಅಧಿಕಾರಕ್ಕಾಗಿ ತಾನು ಸ್ಪರ್ಧೆಗೆ ಇಳಿದಿಲ್ಲ. ಕಾಂಗ್ರೆಸ್ ಹಾಗೂ ಎಸ್.ಡಿ.ಪಿ.ಐ. ವಿರುದ್ಧ ಹೋರಾಟದ ಭಾಗವಾಗಿ ಈ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಇದರ ಹೊರತಾಗಿ ಯಾವುದೇ ಪಕ್ಷಗಳ ವಿರುದ್ಧದ ಹೋರಾಟ ಇದಲ್ಲ ಎಂದು ಸ್ಪಷ್ಟಪಡಿಸಿದರು.

ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಪಕ್ಷ ಮಾಡಲಿ: ಡಾ. ಪುತ್ತೂರಾಯ ಸಲಹೆ

ಡಾ. ಸುರೇಶ್ ಪುತ್ತೂರಾಯ ಮಾತನಾಡಿ, ಧರ್ಮ – ಅಧರ್ಮದ ನಡುವಿನ‌ ಹೋರಾಟ ಇದೆಂದು ಭಾಸವಾಗುತ್ತಿದೆ. ಪಕ್ಷದ ಮುಖಂಡರು ಅವರ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದನ್ನು ಬಿಟ್ಟು, ಅರುಣ್ ಪುತ್ತಿಲ ಅವರ ಬಗ್ಗೆ ಅಪಪ್ರಚಾರದಲ್ಲಿ‌ ತೊಡಗಿಸಿಕೊಂಡಿದ್ದಾರೆ. ಇದು ಬೇಸರದ ಸಂಗತಿ. ಅರುಣ್ ಪುತ್ತಿಲ ಅವರಿಗೆ ದೊರಕಿದ ಇಷ್ಟು ದೊಡ್ಡ ಜನ ಬೆಂಬಲ ನೋಡಿದಾಗ, ಶಾಸಕರಾಗಿ ಆಯ್ಕೆಯಾದ ಮೇಲೆ ಅವರು ಎಷ್ಟು ಉತ್ತಮವಾಗಿ ಕೆಲಸ ಮಾಡಬಹುದೆಂಬುದನ್ನು ನಾವು ಊಹಿಸಬಹುದು. ಆದ್ದರಿಂದ ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡಬೇಡಿ. ಚುನಾವಣೆಯ ದಿನ‌ ಅರುಣ್ ಪುತ್ತಿಲ ಅವರ ಪರವಾಗಿ ಬ್ಯಾಟ್ ಚಿಹ್ನೆಗೆ ಮತ ನೀಡಿ ಎಂದು ಮನವಿ ಮಾಡಿಕೊಂಡರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀಕೃಷ್ಣ ಉಪಾಧ್ಯಾಯ, ಇದು ನಾಯಂಕರ ಅಹಂಕಾರದ ವಿರುದ್ಧದ ಹೋರಾಟ ಎಂದರು.

Leave a Reply

Your email address will not be published. Required fields are marked *

error: Content is protected !!