February 4, 2026

ಬಂಟ್ವಾಳ : ಅಕ್ರಮ ದನ ಸಾಗಾಟಕ್ಕೆ ಯತ್ನ: ಇಬ್ಬರು ಆರೋಪಿಗಳ ಬಂಧನ

0
IMG-20230504-WA0063.jpg

ಬಂಟ್ವಾಳ: ಯಾವುದೇ ಪರವಾನಿಗೆ ಇಲ್ಲದೇ ವಧೆ ಮಾಡವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದ ದನ, ಹಾಗೂ ಕರುವೊಂದನ್ನು ಬಂಟ್ವಾಳ ನಗರ ಪೊಲೀಸರು ರಕ್ಷಿಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ರಾಮಕೃಷ್ಣ ಪಿಎಸ್ಐ ಅವರು ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಗಣೇಶ್ ನಗರ ಎಂಬಲ್ಲಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಗಸ್ತುನಲ್ಲಿದ್ದ ವೇಳೆ ಸುಮಾರು 11:30 ಗಂಟೆಗೆ ವಿಟ್ಲ ಕಡೆಯಿಂದ ಬರುತ್ತಿದ್ದ ಟೆಂಪೋ ವಾಹನವನ್ನು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಟೆಂಪೋ ವಾಹನದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ವಧೆ ಮಾಡಲು ಸಾಗಾಟ ಮಾಡುತ್ತಿದ್ದ ದನ, ಹಾಗೂ ಕರುವೊಂದನ್ನು ವಶಕ್ಕೆ ಪಡೆದುಕೊಂಡು, ಆರೋಪಿಗಳಾದ ಪುದು ಗ್ರಾಮದ ಬಶೀರ್ ಕೆ ಹಾಗೂ ಒಕ್ಕೆತ್ತೂರು ಗ್ರಾಮದ ಜೆರಾಲ್ಡ್ ಮಸ್ಕರೇನಸ್ ಎಂಬವರನ್ನು ದಸ್ತಗಿರಿ ಮಾಡಿದ್ದಾರೆ. ಇನ್ನು ಬಂಧಿತರಿಂದ ಸುಮಾರು ರೂ.13,000 ಮೌಲ್ಯದ ದನ, ಸುಮಾರು ರೂ.3,000 ಮೌಲ್ಯದ ದನದ ಕರು ಹಾಗೂ ಸಾಗಾಟ ಮಾಡಲು ಉಪಯೋಗಿಸಿದ ರೂ.75,000 ಮೌಲ್ಯದ ಟೆಂಪೋ ಪಿಕಪ್ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!