ನಟ ಜಗ್ಗೇಶ್ ಚಿತ್ರದ ಪೋಸ್ಟರ್ ಗಳನ್ನು ಮುಚ್ಚಿದ ಅಧಿಕಾರಿಗಳು
ದಾವಣಗೆರೆ: ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ನಟ ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಚಿತ್ರದ ಪೋಸ್ಟರ್ ಗಳನ್ನು ಚುನಾವಣಾಧಿಕಾರಿಗಳು ಮುಚ್ಚಿದರು.
ದೂರಿನ ಮೇರೆಗೆ ಇಲ್ಲಿನ ಗೀತಾಂಜಲಿ ಚಿತ್ರಮಂದಿರದಲ್ಲಿ ಅಂಟಿಸಿದ್ದ ಪೋಸ್ಟರ್ ಗಳಲ್ಲಿ ನಟ ಜಗ್ಗೇಶ್ ಮುಖ ಕಾಣದಂತೆ ಬಿಳಿ ಹಾಳೆಗಳಿಂದ ಮುಚ್ಚಿದರು. ರಾಜ್ಯಸಭಾ ಸದಸ್ಯರಾಗಿರುವ ಜಗ್ಗೇಶ್ ನಟನೆಯ ರಾಘವೇಂದ್ರ ಸ್ಟೋರ್ಸ್ ಏಪ್ರಿಲ್ 28 ರಂದು ರಾಜ್ಯದಾದ್ಯಂತ ತೆರೆಕಂಡಿದೆ
ಬಿಜೆಪಿ ಪರ ಬಿರುಸಿನ ಪ್ರಚಾರ ನಡೆಸುತ್ತಿದ್ದ ಹಿನ್ನೆಲೆಯಲ್ಲಿ, ಚಿತ್ರಮಂದಿರಗಳಲ್ಲಿ ಜಗ್ಗೇಶ್ ಪೋಸ್ಟರ್‌ಗಳನ್ನು ತೆಗೆಯಬೇಕು ಎಂಬ ದೂರು ಬಂದ ಹಿನ್ನೆಲೆಯಲ್ಲಿ, ಚುನಾವಣೆ ಆಯೋಗದ ಅಧಿಕಾರಿಗಳು, ಚಿತ್ರದ ಪೋಸ್ಟರ್‌ಗಳಲ್ಲಿ ಜಗ್ಗೇಶ್ ಅವರ ಮುಖ ಮುಚ್ಚಿದ್ದಾರೆ. ಮುಖಕ್ಕೆ ಬಿಳಿ ಹಾಳೆ ಅಂಟಿಸಲಾಗಿದೆ




