ರಸ್ತೆ ಅಪಘಾತದಲ್ಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮೃತ್ಯು
ನವಲಗುಂದ: ತಾಲ್ಲೂಕಿನ ಕಿರೇಸೂರ ಗ್ರಾಮದ ಹುಬ್ಬಳ್ಳಿ– ವಿಜಯಪುರ ಹೆದ್ದಾರಿಯಲ್ಲಿ ಭಾನುವಾರ ಸಂಭವಿಸಿದ ಅಪಘಾತದಲ್ಲಿ ಹೆಸ್ಕಾಂ ವಿಚಕ್ಷಣಾ ದಳದ ಸಬ್ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ ಕುಲಕರ್ಣಿ (40) ಮೃತಪಟ್ಟಿದ್ದಾರೆ.
ಕುಮಾರಕೊಪ್ಪ ಗ್ರಾಮದ ಮಲ್ಲಿಕಾರ್ಜುನ ಅವರು ಬೆಳಿಗ್ಗೆ 10ರ ಸುಮಾರಿಗೆ ಸ್ವಗ್ರಾಮಕ್ಕೆ ತಮ್ಮ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಹೋಗುತ್ತಿದ್ದರು. ಕಿರೇಸೂರು ಗ್ರಾಮದ ಸೇತುವೆ ಬಳಿ ಅವರು ಕಾರಿನ ನಿಯಂತ್ರಣ ಕಳೆದುಕೊಂಡಿದ್ದರಿಂದ, ಪಕ್ಕದ ತಡೆಗೋಡೆಗೆ ಕಾರು ಡಿಕ್ಕಿಯಾಗಿದೆ.
ಮಲ್ಲಿಕಾರ್ಜುನ ಅವರು 2010ನೇ ಬ್ಯಾಚ್‌ನ ಪೊಲೀಸ್ ಅಧಿಕಾರಿಯಾಗಿದ್ದಾರೆ. ಅವರಿಗೆ ಪತ್ನಿ ಮತ್ತು ಒಬ್ಬ ಪುತ್ರ ಇದ್ದಾನೆ. ಘಟನೆ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





