December 15, 2025

ಉಡುಪಿ: ಚುನಾವಣಾ ಪ್ರಚಾರದ ವೇದಿಕೆಯಲ್ಲೇ ಕೋಟಾ ಶ್ರೀನಿವಾಸ ಪೂಜಾರಿಗೆ ಗದರಿಸಿದ‌ ಅಮಿತ್ ಶಾ: ಕಾಂಗ್ರೆಸ್ ಟೀಕೆ

0
n4951428041682864134378d9de5f2a906f53325dde92ad767a5266046b1512685050df80dcc70a7a666fcc.jpg

ಉಡುಪಿ: ಅಮಿತ್‌ ಶಾ ಅವರು ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಚುನಾವಣಾ ಪ್ರಚಾರದ ವೇದಿಕೆಯಲ್ಲೇ ಗದರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ಕುರಿತು ಸುದ್ದಿ ಮಾದ್ಯಮವೊಂದರ ಸುದ್ದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ ಕಾಂಗ್ರೆಸ್, ಬಿಜೆಪಿಯಲ್ಲಿ ಮೊ-ಶಾ ಜೋಡಿಯ ಮುಂದೆ ಯಾರಿಗೂ ಸ್ವತಂತ್ರವಿಲ್ಲ. ‘ಶಾ’ಭಿಮಾನ ಇರಬೇಕೆ ಹೊರತು ಸ್ವಾಭಿಮಾನ ಇರಕೂಡದು ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ.

ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಚಿಕ್ಕ ಮಕ್ಕಳನ್ನು ಗದರುವಂತೆ ಗದರಿದ ಅಮಿತ್ ಶಾ ಕನ್ನಡಿಗರನ್ನು, ಹಿಂದುಳಿದ ವರ್ಗವನ್ನು ನಿಷ್ಕೃಷ್ಠವಾಗಿ ಕಂಡಿದ್ದಾರೆ. ಬಿಜೆಪಿ ನಾಯಕರನ್ನು ಸೃಷ್ಟಿಸುವುದಿಲ್ಲ, ಅಮಿತ್ ಶಾ ಕಾಲಿನಡಿ ಕೂರುವ ಗುಲಾಮರನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಉದಾಹರಣೆ ಇದು ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ‌.

ಬಿಜೆಪಿ ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು ವಿಫಲವಾಗಿದ್ದಾರೆಂದು ಶ್ರೀನಿವಾಸ್‌ ಪೂಜಾರಿಗೆ ಗದರಿಸಿದ್ದಾರೆ ಎಂದು ಕಾಂಗ್ರೆಸ್ ಇದೇ ವೇಳೆ ಬಿಜೆಪಿಗೆ ಕಾಲೆಳೆದಿದೆ. ಅಮಿತ್ ಶಾ ಮಾತನಾಡುವಾಗ ಶ್ರೀನಿವಾಸ್ ಪೂಜಾರಿ ಏನೋ ಹೇಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಕೋಪಗೊಂಡ ಅಮಿತ್ ಶಾ ಶ್ರೀನಿವಾಸ್ ಪೂಜಾರಿಗೆ ಗದರಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!