February 1, 2026

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜೂನ್ 1ರಿಂದ ಯಾರೂ ಕರೆಂಟ್ ಬಿಲ್ ಕಟ್ಟಬೇಡಿ: ಡಿ.ಕೆ ಶಿವಕುಮಾರ್

0
IMG-20230429-WA0033.jpg

ಮಳವಳ್ಳಿ: ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗೆ ಐದು ಗ್ಯಾರಂಟಿ ಭರವಸೆ ನೀಡಿದ್ದು, ಜೂನ್ 1 ರಿಂದ ಕಾಂಗ್ರೆಸ್ ಪಕ್ಷದ ಹೊಸ ಸರ್ಕಾರ ಬರುತ್ತದೆ. ಅಲ್ಲಿಂದ ಯಾರು ಕರೆಂಟ್ ಬಿಲ್ಲನ್ನು ಕಟ್ಟಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಬೆಲೆ ಏರಿಕೆ ಮೀತಿ ಮೀರಿದ್ದು, ವರ್ಷಕ್ಕೆ ಪ್ರತಿ ಕುಟುಂಬಕ್ಕೆ ಹೊಸ ಸರಕಾರದ ವತಿಯಿಂದ 24 ಸಾವಿರ ಬರುತ್ತದೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ಕುಟುಂಬಕ್ಕೆ 10 ಕೆಜಿ ಕೊಡುತ್ತೇವೆ. ಬಡವರು ಹಸಿವಿನಿಂದ ಬಳಲಬಾರದು ಯುವಕರಿಗೆ ಕೆಲಸ ಕೊಡುತ್ತೇವೆ ಅಂತ ಬಿಜೆಪಿ ಹೇಳಿತ್ತು. ಆದರೆ ಆ ಮೇಲೆ ಪಕೋಡ ಮಾರಿ ಅಂತ ಹೇಳಿದರು. ಪದವಿ ಓದಿ ಪಕೋಡ ಮಾರಾಟ ಮಾಡಬೇಕಾ.? ಎಂದು ಪ್ರಶ್ನಿಸಿದ್ದಾರೆ.

ಇನ್ನು ಪದವಿ ಮಾಡಿರೋ ಯುವಕ, ಯುವತಿಯರಿಗೆ ಪ್ರೋತ್ಸಾಹ ಧನ ನೀಡುತ್ತೇವೆ. ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುತ್ತೇವೆ. ಇವುಗಳನ್ನೆಲ್ಲಾ ಘೋಷಣೆ ಮಾಡಿಲ್ಲ ಅಂದ್ರೆ‌ ಮತ್ತೆ ನಾವು ನಿಮ್ಮಲ್ಲಿ ಓಟು ಕೇಳೋಕೆ ಬರಲ್ಲ. ಇದು ಕಾಂಗ್ರೆಸ್ ಪಕ್ಷದ ಶಪಥ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!