March 19, 2026

ಕೊಡ್ಲಿಗಿ ಹೆಲಿಪ್ಯಾಡ್ ಬಳಿ ಕಾರು ಹತ್ತುವ ವೇಳೆ ಕುಸಿದು ಬಿದ್ದ ಸಿದ್ದರಾಮಯ್ಯ

0
IMG-20230429-WA0023.jpg

ವಿಜಯನಗರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕಾರು ಹತ್ತುವಾಗ ಬಾಗಿಲ ಬಳಿಯೇ ಕುಸಿದು ಬಿದ್ದಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಗಿಯಲ್ಲಿ ಶನಿವಾರ ನಡೆದಿದೆ.

ಸಿದ್ದರಾಮಯ್ಯ ಅವರು ಕೂಡ್ಲಗಿ ಕಾಂಗ್ರೆಸ್ ಅಭ್ಯರ್ಥಿ ಡಾ. ಎನ್ ಟಿ ಶ್ರೀನಿವಾಸ್ ಅವರ ಪರ ಪ್ರಚಾರ ಮಾಡುವುದಕ್ಕಾಗಿ ಹೆಲಿಕಾಪ್ಟರ್​ ಮೂಲಕ ಕೂಡ್ಲಗಿಗೆ ಕೂಡ್ಲಿಗಿಗೆ ತೆರಳಿದ್ದರು. ಹೆಲಿಕ್ಯಾಪ್ಟರನಿಂದ ಇಳಿದ ಕೂಡಲೇ ಮೊಬೈಲ್​ನಲ್ಲಿ ಬ್ಯೂಸಿ ಅವರು ಕಾರಿನ ಬಳಿ ಆಗಮಿಸಿದ್ದಾರೆ. ನಂತರ ಕಾರಿನೊಳಗೆ ಕೂಡಬೇಕೆನ್ನುವಷ್ಟರಲ್ಲಿ ಬಾಗಿಲ ಬಳಿಯೇ ಕುಸಿದು ಬಿದ್ದಿದ್ದಾರೆ.

ಇನ್ನು ತಕ್ಷಣವೆ ಸ್ಥಳದಲ್ಲಿದ್ದ ಅವರ ಅಂಗರಕ್ಷಕ ನೆರವಿಗೆ ಧಾವಿಸಿ ಕೈ ಹಿಡಿದು ಎತ್ತಿ ಬಳಿಕ ಕಾರಿನ ಸೀಟಿನ ಮೇಲೆ ಕೂಡಿಸಿ ವೈದ್ಯರು ಗುಕ್ಲೋಸ್ ನೀಡಿದ್ದಾರೆ. ಬಳಿಕ ಚೇತರಿಸಿಕೊಂಡು ಮತ್ತೆ ಸಿದ್ದರಾಮಯ್ಯ ಜನರತ್ತ ಕೈ ಬೀಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!