ಕಣಿಯೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಪ್ರದೇಶಗಳಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಬಿರುಸಿನ ಮತಯಾಚನೆ
ಬೆಳ್ತಂಗಡಿ: ಬೆಳ್ತಂಗಡಿ ಕ್ಷೇತ್ರ ಕಣಿಯೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಇಲಂತಿಲ, ಜೋಗಿಬೆಟ್ಟು, ಸರಳಿಕಟ್ಟೆ, ತೆಕ್ಕಾರ್, ಬಾಜಾರ್, ಕಡವಿನ ಬಾಗಿಲು, ಕಲ್ಲೇರಿ, ಕುಪೆಟ್ಟಿ, ಕರಾಯ, ಪದ್ಮುಂಜ, ಪಿಲಿಗೂಡು, ಕುದ್ರಡ್ಕ ಪರಿಸರದಲ್ಲಿ ಬೆಳ್ತಂಗಡಿ ಕ್ಷೇತ್ರದ ಎಸ್‌ಡಿಪಿಐ ಅಭ್ಯರ್ಥಿ ಶ್ರೀ. ಅಕ್ಬರ್ ಬೆಳ್ತಂಗಡಿ ಅವರು ಮನೆ ಮನೆಗೆ ಭೇಟಿ ನೀಡಿ ಮತ ಯಾಚಿಸಿದರು.




ಈ ಭಾಗದ ಎಸ್‌ಡಿಪಿಐ ಬೆಂಬಲಿತ ಪಂಚಾಯತ್ ಸದಸ್ಯರ ಕೆಲಸವನ್ನು ಮತದಾರರು ಕಂಡಿದ್ದು ಜನರು ಬಹಳ ಸಂತುಷ್ಟರಾಗಿದ್ದಾರೆ. ಅಕ್ಬರ್ ಬೆಳ್ತಂಗಡಿ ಶಾಸಕರಾಗಿ ಆಯ್ಕೆಯಾಗಿ ಬರಲೆಂದು ಜನರು ಹಾರೈಸಿದರು.



ಈ ಸಂದರ್ಭದಲ್ಲಿ ಕೇರಳ ಎಸ್‌ಡಿಪಿಐ ನಾಯಕ ಹಮೀದ್ ಹೊಸಂಗಡಿ, ಎಸ್‌ಡಿಪಿಐ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ನವಾಝ್ ಕಟ್ಟೆ, ಕಾರ್ಯದರ್ಶಿ ಹಾಗೂ ತಣ್ಣೀರುಪಂಥ ಪಂಚಾಯತ್ ಸದಸ್ಯರಾದ ನಿಸಾರ್ ಕುದ್ರಡ್ಕ, ಕ್ಷೇತ್ರ ಸಮಿತಿ ಸದಸ್ಯರಾದ ಇನಾಸ್ ರೋಡ್ರಿಗಸ್, ಬಾರ್ಯ ಪಂಚಾಯತ್ ಸದಸ್ಯ ಫೈಝಲ್ ಮೂರುಗೊಳಿ, ತೆಕ್ಕಾರು ಪಂಚಾಯತ್ ಸದಸ್ಯ ಅನ್ವರ್ ತೆಕ್ಕಾರು, ಮಾಜಿ ಪಂಚಾಯತ್ ಸದಸ್ಯರಾದ ಶುಕುರು ಕುಪೆಟ್ಟಿ, ನಝಿರ್ ಬಾಜಾರ್, ನವಾಝ್ ಕುದ್ರಡ್ಕ, ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.




