January 31, 2026

ಸುಬ್ರಹ್ಮಣ್ಯ: ಅಸ್ವಸ್ಥಗೊಂಡು ಸಂಚಾರ ಮಾಡುತ್ತಿದ್ದ ಕಾಡಾನೆ ಸಾವು

0
image_editor_output_image-1268336951-1682658379861.jpg

ದಕ್ಷಿಣ ಕನ್ನಡ: ಹಲವು ದಿನಗಳಿಂದ ಅಸ್ವಸ್ಥಗೊಂಡು ಸಂಚಾರ ಮಾಡುತ್ತಿದ್ದ ಕಾಡಾನೆ ಕೊನೆಗೂ ಮೃತಪಟ್ಟಿದೆ. ಸುಬ್ರಹ್ಮಣ್ಯದ ಕೆಂಜಾಳ, ಎರ್ಮಾಯಿಲ್ ಪರಿಸರದಲ್ಲಿ ಈ ಆನೆ ಸಂಚಾರ ಮಾಡುತ್ತಿತ್ತು.

ಗುರುವಾರ ಈ ಕಾಡಾನೆ ಸಂಪೂರ್ಣವಾಗಿ ನಿತ್ರಾಣವಾದ ಸ್ಥಿತಿಯಲ್ಲಿ ಚೇರು ಎಂಬಲ್ಲಿ ಹಳ್ಳವೊಂದರಲ್ಲಿ ಪತ್ತೆಯಾಗಿತ್ತು.ಅರಣ್ಯ ಅಧಿಕಾರಿಗಳು ಈ ಆನೆ ನೀರು ಸಹಾ ಕುಡಿಯುತ್ತಿಲ್ಲ ಎಂಬುದಾಗಿ ಮಾಹಿತಿ ನೀಡಿದ್ದರು.

ಈ ಕಾಡಾನೆ ವಯೋಸಹಜ ತೊಂದರೆಗಳಿಂದ ಬಳಲುತ್ತಿರುವ ಶಂಕೆ ವ್ಯಕ್ತಪಡಿಸಿದ್ದರು. ಈ ಆನೆಯ ಹಲ್ಲುಗಳು ಉದುರಿರುವುದು ಗಮನಕ್ಕೆ ಬಂದಿದೆ. ಈ ಕಾರಣದಿಂದಾಗಿ ಆನೆ ಆಹಾರ ಸೇವಿಸುವಾಗ ಜೀರ್ಣವಾಗದೇ ವಾಂತಿ ಮಾಡುತ್ತಿರಬಹುದು ಎನ್ನಲಾಗಿತ್ತು.

ಆದರೆ ನಿನ್ನೆ ರಾತ್ರಿ ಸುಮಾರು ಹನ್ನೆರಡು ಗಂಟೆಗಳ ಸುಮಾರಿಗೆ ಇಲ್ಲಿನ ಬಗ್ಪುಣಿ ಎಂಬಲ್ಲಿ ಕಾಡಾನೆಯ ಮೃತದೇಹ ಪತ್ತೆಯಾಗಿದೆ.

ಈ ಆನೆಗೆ ಅಂದಾಜು 50 ರಿಂದ 55 ವರ್ಷ ವಯಸ್ಸು ಇರಬಹುದೆಂದು ಅಂದಾಜಿಸಲಾಗಿದೆ. ಅರಣ್ಯ ಅಧಿಕಾರಿಗಳು, ವೈದ್ಯರು ಆಗಮಿಸಿದ ನಂತರದಲ್ಲಿ ಮಹಜರು ಸೇರಿದಂತೆ ಮುಂದಿನ ಕ್ರಮಗಳು ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!