March 19, 2026

ಮಲಯಾಳಂ ಚಿತ್ರರಂಗದಿಂದ ಇಬ್ಬರು ಯುವ ನಟರಿಗೆ ನಿಷೇಧ ಹೇರಿಕೆ!

0
shane-sreenath-sixteen_nine.jpg

ಕೊಚ್ಚಿ: ಶೂಟಿಂಗ್ ಸ್ಥಳದಲ್ಲಿ ಗಲಾಟೆ ಎಬ್ಬಿಸುತ್ತಿದ್ದ ಇಬ್ಬರು ಖ್ಯಾತ ನಟರನ್ನು ಮಲೆಯಳಂ ಚಿತ್ರರಂಗದ ನಿರ್ಮಾಪಕರು, ನಟರು ಮತ್ತು ತಂತ್ರಜ್ಞರ ಸಂಘಗಳು ಅವರೊಂದಿಗೆ ಕೆಲಸ ಮಾಡುವುದಿಲ್ಲ ಎಂದು ನಿರ್ಧರಿಸಿವೆ. ಖ್ಯಾತ ನಟರಾದ ಶೇನ್ ನಿಗಮ್ ಮತ್ತು ಶ್ರೀನಾಥ್ ಭಾಸಿ ಅವರೊಂದಿಗೆ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಮಲೆಯಾಳಂನ ಚಿತ್ರರಂಗದ ಸಂಘಗಳು ನಿರ್ಧರಿಸಿವೆ.

Film Employees Federation of Kerala (FEFKA) ಮತ್ತು Association of Malayalam Movie Artists (AMMA) ಜಂಟಿಯಾಗಿ ಈ ನಿರ್ಧಾರ ತೆಗೆದುಕೊಂಡಿದೆ. ನಿರ್ಮಾಪಕರ ಸಂಘ ಮತ್ತು ಮಲಯಾಳಂ ಚಲನಚಿತ್ರ ಕಲಾವಿದರ ಸಂಘ ನಡುವೆ ಏಪ್ರಿಲ್ 25 ರಂದು ಈ ಬಗ್ಗೆ ಕೊಚ್ಚಿಯಲ್ಲಿ ಸಭೆ ನಡೆದಿದೆ. ಜನಪ್ರಿಯ ಮಲಯಾಳಂ ಸಿನಿಮಾ ʻಕುಂಬಳಂಗಿ ನೈಟ್ಸ್ʼ ಸಿನಿಮಾದಲ್ಲಿ ಶ್ರೀನಾಥ್ ಬಾಸಿ ಹಾಗೂ ಶೇನ್ ನಿಗಮ್ ಒಟ್ಟಿಗೆ ನಟಿಸಿದ್ದರು.

ಅನೇಕ ಹಿಟ್ ಸಿನಿಮಾಗಳಲ್ಲಿ ಇಬ್ಬರು ನಟಿಸಿದ್ದಾರೆ. ಈ ಇಬ್ಬರು ನಟರ ವಿರುದ್ಧ ಸಾಕಷ್ಟು ದೂರುಗಳು ಕೇಳಿಬರುತ್ತಿತ್ತು. ನಿರ್ಮಾಪಕರ ಸಂಘ ಮತ್ತು ಮಲಯಾಳಂ ಚಲನಚಿತ್ರ ಕಲಾವಿದರ ಸಂಘ ಇಂಥದ್ದೊಂದು ನಿರ್ಧಾರ ತಗೆದುಕೊಳ್ಳಲು ಕಾರಣ ಸೆಟ್‌ನಲ್ಲಿ ಈ ಇಬ್ಬರೂ ಕಲಾವಿದರು ಸಾಕಷ್ಟು ಅಶಿಸ್ತು ತೋರಿಸುತ್ತಿದ್ದರಂತೆ. ಶೂಟಿಂಗ್ ಸೆಟ್‌ನಲ್ಲೇ ಮಾದಕ ವ್ಯಸನದ ಗುಂಗಿನಲ್ಲಿ ಇರುತ್ತಿದ್ದರು ಎಂದು ಆರೋಪಿಸಲಾಗಿದೆ. ಇವರಿಬ್ಬರೂ ಇನ್ನು ಮುಂದೆ ಯಾವುದೇ ಸಿನಿಮಾಗೆ ಸಹಿ ಹಾಕಬಾರದು, ಹಾಗೂ ಈ ಇಬ್ಬರು ನಟರು ಇರುವ ಸಿನಿಮಾಕ್ಕೆ ಸಹಕಾರ ನೀಡದೇ ಇರಲು ಈ ಸಂಘಟನೆಗಳು ನಿರ್ಧರಿಸಿವೆ.

ಕೊಚ್ಚಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇರಳ ಸಿನಿಮಾ ನಿರ್ಮಾಪಕರ ಸಂಘದ ಅಧ್ಯಕ್ಷ ಎಂ ರಂಜಿತ್ ಈ ಬಗ್ಗೆ ಮಾತನಾಡಿ ʻʻಶೇನ್ ನಿಗಮ್ ಮತ್ತು ಶ್ರೀನಾಥ್ ಬಾಸಿ ಇಬ್ಬರ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಇಬ್ಬರೂ ಶೂಟಿಂಗ್ ಸೆಟ್‌ನಲ್ಲಿ ಮಾದಕ ವ್ಯಸನದ ಗುಂಗಿನಲ್ಲಿರುತ್ತಾರೆ. ಈ ಇಬ್ಬರೂ ನಟರಿಂದ ಸಿನಿಮಾ ನಿರ್ಮಾಪಕರು, ತಂತ್ರಜ್ಞರು ಮತ್ತು ಸಹ-ನಟರು ಪದೇ ಪದೇ ತೊಂದರೆಗೊಳಗಾಗಿದ್ದಾರೆ’ ಎಂದು ಆರೋಪಿಸಿದ್ದಾರೆ.

ಶೇನ್ ನಿಗಮ್ ಮತ್ತು ಶ್ರೀನಾಥ್ ಬಾಸಿ ಹೀಗೆ ಸಿನಿಮಾಗಳಿಗೆ ತೊಂದರೆ ಕೊಡುತ್ತಿರುವುದು ಇದೇ ಮೊದಲೇನೂ ಅಲ್ಲ ಎಂದಿರುವ ನಿರ್ಮಾಪಕರ ಸಂಘದ ಅಧ್ಯಕ್ಷ ಎಂ. ರಂಜಿತ್, ಕೆಲವು ವಾರಗಳ ಹಿಂದೆಯಷ್ಟೇ ಆರ್.ಡಿ.ಎಕ್ಸ್ (RDX) ಹೆಸರಿನ ಸಿನಿಮಾದಿಂದಲೂ ಈ ನಟರು ಹೊರ ಬಂದಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.

ಆರ್.ಡಿ.ಎಕ್ಸ್ ಸಿನಿಮಾದಲ್ಲಿ ಶೇನ್ ನಿಗಮ್ ಜತೆಗೆ ಲಾಲ್ ಮತ್ತು ಅಂಟೋನಿ ವರ್ಗೀಸ್ ಅಂಥಹಾ ದೊಡ್ಡ ನಟರುಗಳು ಸಹ ಇದ್ದರು. ಸಿನಿಮಾದ ಚಿತ್ರೀಕರಣ 90% ಮುಗಿದಿತ್ತು. ಆಗ ಶೇನ್ ನಿಗಮ್ ಸೆಟ್ ನಿಂದ ಹೊರಗೆ ಹೋಗಿದ್ದರು ಎಂದು ಹೇಳಿಕೆ ನೀಡಿದ್ದಾರೆ.

ಕೆಲವು ಹೊಸ ತಲೆಮಾರಿನ ನಟರು ಡ್ರಗ್ಸ್ ಸೇವಿಸಿದ ನಂತರ ಸೆಟ್‌ಗೆ ಬರುತ್ತಾರೆ ಮತ್ತು ಪ್ರೊಡಕ್ಷನ್ ಕಂಟ್ರೋಲರ್‌ಗಳ ಮೇಲೆ ನಿಂದಿಸುತ್ತಾರೆ ಎಂದು ಅವರು ಹೇಳಿದರು. ಅಂತಹ ನಟರ ಹೆಸರನ್ನು ಸರ್ಕಾರಕ್ಕೆ ವರದಿ ಮಾಡಲು ನಾವು ನಿರ್ಧರಿಸಿದ್ದೇವೆ. ನಾವು ಅವರ ಹೆಸರನ್ನು ಸಾರ್ವಜನಿಕಗೊಳಿಸುತ್ತಿಲ್ಲ. ಸರ್ಕಾರ ತನಿಖೆ ನಡೆಸಲಿ’ ಎಂದು ರೆಂಜಿತ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!