May 15, 2026

ಅಂಗಡಿಯಿಂದ 10 ಕೆ.ಜಿ ಮಾವಿನ ಹಣ್ಣಿನ ಪೆಟ್ಟಿಗೆ ಕದ್ದ ಪೊಲೀಸ್ ಪೇದೆ ಅಮಾನತು

0
n4939952701682519868978d96f3c88d85dfb3749031561b5a878f4074b62b9060e06eab2fac30de0e06ef4.jpg

ಇಡುಕ್ಕಿ: ಸಿವಿಲ್ ಪೊಲೀಸ್ ಅಧಿಕಾರಿಯೊಬ್ಬರು ಅಂಗಡಿಯೊಂದರಿಂದ 10 ಕೆಜಿ ಮಾವಿನ ಹಣ್ಣಿನ ಪೆಟ್ಟಿಗೆಯನ್ನು ಕದ್ದೊಯ್ದಿದ್ದಾರೆ ಎಂಬ ಸುದ್ದಿ ಹೊರಬಿದ್ದ ನಂತರ, ಕೇರಳದ ಪೊಲೀಸ್ ಇಲಾಖೆ ಬುಧವಾರ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಿದೆ.

ಇಡುಕ್ಕಿಯ ಪೊಲೀಸ್ ಅಧೀಕ್ಷಕರು ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಪೊಲೀಸ್ ಅಧಿಕಾರಿ ಪಿ.ವಿ. ಶಿಹಾಬ್ ಅವರು ಕೊಟ್ಟಾಯಂ ಜಿಲ್ಲೆಯ ಕಂಜಿರಪಲ್ಲಿಯ ಅಂಗಡಿಯೊಂದರ ಮುಂಭಾಗ ಇರಿಸಲಾಗಿದ್ದ ಮಾವಿನ ಹಣ್ಣಿನ ಪೆಟ್ಟಿಗೆಯನ್ನು ಒಯ್ಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆಗ ಕೆಜಿ ಮಾವಿನಹಣ್ಣಿಗೆ 500 ರೂ.ಗೂ ಅಧಿಕ ಬೆಲೆಯಿತ್ತು. ಬಳಿಕ ಅವರು, ತಮ್ಮ ದ್ವಿಚಕ್ರ ವಾಹನದ ಮೇಲೆ ಬಾಕ್ಸ್ ಇಟ್ಟುಕೊಂಡು ಓಡಿಸುತ್ತಿದ್ದ ದೃಶ್ಯಗಳು ಕಂಡುಬಂದಿದ್ದವು.

ಅಂಗಡಿಯ ಮಾಲೀಕ ಮರುದಿನ ತನ್ನ ಅಂಗಡಿಯನ್ನು ತೆರೆಯಲು ಬಂದಾಗ, ಮಾವಿನ ಹಣ್ಣಿನ ಪೆಟ್ಟಿಗೆ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಬಳಿಕ ಅವರು ತಮ್ಮ ಸಿಸಿಟಿವಿಯನ್ನು ಪರಿಶೀಲಿಸಿದಾಗ ಪೊಲೀಸರು ಹಣ್ಣನ್ನು ತೆಗೆದುಕೊಂಡು ಹೋಗಿರುವುದನ್ನು ಕಂಡು ಗಾಬರಿಗೊಂಡಿದ್ದರು. ವಿಡಿಯೋ ವೈರಲ್ ಆದ ನಂತರ, ಇಡುಕ್ಕಿ ಸಶಸ್ತ್ರ ಮೀಸಲು ಶಿಬಿರ ಪೊಲೀಸ್ ಘಟಕಕ್ಕೆ ನಿಯೋಜಿಸಲಾಗಿದ್ದ ಶಿಹಾಬ್ ನಾಪತ್ತೆಯಾಗಿದ್ದರು. ಕೂಡಲೇ ಆತನ ವಿರುದ್ಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯ ನಂತರ ಇಡುಕ್ಕಿ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅವರನ್ನು ಅಮಾನತುಗೊಳಿಸಲಾಗಿತ್ತು. ಮುಂಡಕ್ಕಯಂ ಪೊಲೀಸರು ಶಿಹಾಬ್ ವಿರುದ್ಧ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದರು. ಮನೆಗೆ ನುಗ್ಗಿ ಕೈದಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲೂ ಆರೋಪಿಯಾಗಿದ್ದ.

Leave a Reply

Your email address will not be published. Required fields are marked *

error: Content is protected !!