ದ್ವಿತೀಯ ಪಿಯುಸಿ ಪರೀಕ್ಷೆ: ತಾಜುಲ್ ಉಲಮಾ ಮಹಿಳಾ ಶರೀಅತ್ ಉಕ್ಕುಡ ಕಾಲೇಜಿಗೆ 100% ಫಲಿತಾಂಶ
ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಜುಲ್ ಉಲಮಾ ಮಹಿಳಾ ಶರೀಅತ್ ಪಿಯುಸಿ ಉಕ್ಕುಡ ಕಾಲೇಜ್ ಗೆ 100 % ಫಲಿತಾಂಶ ದೊಂದಿಗೆ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದಾರೆ.
ಅಳಿಕೆ ಅಬ್ದುಲ್ ಮಜೀದ್ ಬದ್ರುನ್ನೀಸ ದಂಪತಿಗಳ ಪುತ್ರಿ ಸುನೈಫಾ ಇವರು 535 ಡಿಸ್ಟಿಂಕ್ಷನ್ ಅಂಕಗಳೊಂದಿಗೆ ತೇರ್ಗಡೆಗೊಂಡು ಕಾಲೇಜ್ ಗೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.




