February 1, 2026

ಗೇಮ್‌ ಆಡುತ್ತಿರುವಾಗ ಮೊಬೈಲ್‌ ಸ್ಫೋಟ: ಬಾಲಕಿ ಮೃತ್ಯು

0
image_editor_output_image-2085233182-1682415902721.jpg

ತ್ರಿಶೂರ್:‌ ಮೊಬೈಲ್‌ ಗೇಮ್‌ ಆಡುತ್ತಿರುವಾಗ ಮೊಬೈಲ್‌ ಸ್ಫೋಟಗೊಂಡು ಬಾಲಕಿಯೊಬ್ಬಳು ಮೃತಪಟ್ಟಿರುವ ದುರಂತ ಘಟನೆ ತ್ರಿಶೂರ್ ನ ತಿರುವಿಲ್ವಾಮಲ ನಡೆದಿರುವುದು ವರದಿಯಾಗಿದೆ.

ಪಟ್ಟಿಪರಂಬುವಿನ ಆದಿತ್ಯಶ್ರೀ (8) ಮೃತ ಬಾಲಕಿ.

ಸೋಮವಾರ (ಎ.24 ರಂದು) ರಾತ್ರಿ 10:30 ರ ವೇಳೆಗೆ ಬಾಲಕಿ ಆದಿತ್ಯಶ್ರೀ ಮೊಬೈಲ್‌ ನಲ್ಲಿ ಗೇಮ್‌ ಆಡುತ್ತಿರುವಾಗ ಮೊಬೈಲ್‌ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಮುಖ,ಕೈಗೆ ಗಂಭೀರ ಗಾಯಗೊಂಡ ಪರಿಣಾಮ ಮೃತಪಟ್ಟಿದ್ದಾಳೆ.

ಮೊಬೈಲ್‌ ನಲ್ಲಿ ಗೇಮ್‌ ಹಾಗೂ ವಿಡಿಯೋವನ್ನು ಹೆಚ್ಚಿನ ಸಮಯದಿಂದ ನೋಡುತ್ತಿದ್ದ ಪರಿಣಾಮ ಮೊಬೈಲ್‌ ನ ಬ್ಯಾಟರಿ ಬಿಸಿಯಾಗಿದೆ ಇದರಿಂದ ಮೊಬೈಲ್‌ ಸ್ಫೋಟಿಸಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!