July 6, 2026

ಮಂಗಳೂರು: ರೈಲಿನ ಶೌಚಾಲಯದಲ್ಲಿ ಕಿನ್ನಿಗೋಳಿ ನಿವಾಸಿಯ ಮೃತದೇಹ ಪತ್ತೆ

0
image_editor_output_image-1206816343-1682406259967.jpg

ಮಂಗಳೂರು: ಮುಂಬೈ- ಮಂಗಳೂರು ರೈಲಿನಲ್ಲಿ ಊರಿಗೆ ಮರಳುತ್ತಿದ್ದ ವ್ಯಕ್ತಿಯೊಬ್ಬರು ರೈಲಿನ ಶೌಚಾಲಯದಲ್ಲೇ ಮೃತಪಟ್ಟಿದ್ದು, ಈ ವಿಷಯ ರೈಲಿನ ಸಿಬಂದಿಯ ಗಮನಕ್ಕೇ ಬಾರದೆ ಮೃತದೇಹವು ಮತ್ತೆ ಅದೇ ರೈಲಿನಲ್ಲಿ ಮುಂಬಯಿಗೆ ಹೋಗಿರುವ ಘಟನೆ ನಡೆದಿದೆ.

ಕಿನ್ನಿಗೋಳಿಯ ಮೆನ್ನ ಬೆಟ್ಟಿ ನವರಾದ ಮೋಹನ್‌ ಬಂಗೇರ (56) ಅವರು ಮುಂಬಯಿಯಿಂದ ಊರಿಗೆ ಮರಳುವ ವೇಳೆಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದರೆ ಈ ವಿಷಯ ಗೊತ್ತಾಗದೆ ಅವರ ಕುಟುಂಬಿಕರು ಮುಂಬಯಿವರೆಗೂ ಹುಡುಕಾಡಿದ್ದಾರೆ. ಆದರೆ ಅವರಿದ್ದ ಬೋಗಿಯ ಶೌಚಾಲಯ ಸಹಿತ ತಪಾಸಣೆ  ಮಾಡಬೇಕಿದ್ದ ರೈಲು ಸಿಬಂದಿ ಕರ್ತವ್ಯಲೋಪ ಮಾಡಿದ್ದಲ್ಲದೆ ತಾವು ತಪಾಸಣೆ ಮಾಡಿದ್ದಾಗಿ ವರದಿ ಕೊಟ್ಟಿ ರುವುದು ನೋವು ತಂದಿದೆ.

ಮೃತದೇಹವನ್ನು ರೈಲಿನಲ್ಲೇ ಮತ್ತೆ ಹಿಂದೆ ಕಳುಹಿಸಲು, ಮರಣೋತ್ತರ ಪರೀಕ್ಷೆಗೆ 10 ಸಾವಿರ ರೂ.ಗಳನ್ನು ಪಾವತಿಸಿದ್ದು ಏಜೆನ್ಸಿಯೊಂದು ಪ್ಯಾಕ್‌ ಮಾಡಿ ಕಳಿಸಿದೆ. ಆದರೆ ಪಾರ್ಸೆಲ್‌ ಇಲ್ಲಿಗೆ ಬರುವಾಗ ದೇಹ ಪೂರ್ಣ ಕೊಳೆತು ದುರ್ವಾಸನೆ ಬೀರುತ್ತಿತ್ತು.

Leave a Reply

Your email address will not be published. Required fields are marked *

You may have missed

error: Content is protected !!