February 3, 2026

ಮಡಿಕೇರಿ: ಗುಂಡು ಹಾರಿಸಿ ವ್ಯಕ್ತಿಯ ಹತ್ಯೆ

0
image_editor_output_image-1543296766-1681687786850.jpg

ಮಡಿಕೇರಿ: ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಗುಂಡು ಹಾರಿಸಿ ಹತ್ಯೆಗೈದ ಘಟನೆ ಕೊಡಗಿನ ವಿರಾಜಪೇಟೆಯ ತೋರ ಗ್ರಾಮದಲ್ಲಿ ಶನಿವಾರ ತಡ ರಾತ್ರಿ ನಡೆದಿದೆ.

ಗ್ರಾಮದ ಬೈಮನ ನಾಣಯ್ಯ ಅವರ ಪುತ್ರ ಬಿ.ಎಂ ಮಧು (44) ಮೃತ ದುರ್ದೈವಿ. ರಾತ್ರಿ 12ರ ವೇಳೆಗೆ ಗ್ರಾಮದ ಪಡಚಿಕಾಡು ಕಾಲೋನಿಯಲ್ಲಿ ಈ ದುರ್ಘಟನೆ ನಡೆದಿದೆ.

ತೋಟದ ರಸ್ತೆ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಹಲವಾರು ವರ್ಷಗಳಿಂದ ಮಧು ಹಾಗೂ ಊರಿನ ಕೆಲವರ ನಡುವೆ ಮನಸ್ತಾಪ ಇತ್ತು ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!