ಶಾಲೆಯಲ್ಲಿ 16 ವರ್ಷದ ಇಬ್ಬರು ಹುಡುಗರೊಂದಿಗೆ ಲೈಂಗಿಕ ಕ್ರಿಯೆ: 6 ಮಂದಿ ಶಿಕ್ಷಕಿಯರ ಬಂಧನ
ವಾಷಿಂಗ್ಟನ್: ವಿವಿಧ ಪ್ರಕರಣಗಳಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಯುಎಸ್‌ನ 6 ಮಂದಿ ಶಿಕ್ಷಕಿಯರನ್ನ ಪೊಲೀಸರು ಬಂಧಿಸಿರುವ ಆಘಾತಕಾರಿ ಘಟನೆ ಅಮೆರಿಕದಲ್ಲಿ ನಡೆದಿದೆ.
ಅನೇಕ ಸಮಯದಿಂದ ವಿದ್ಯಾರ್ಥಿಗಳನ್ನ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಎರಡು ದಿನಗಳ ಅವಧಿಯಲ್ಲಿ ಒಟ್ಟು 6 ಮಂದಿ ಶಿಕ್ಷಕಿಯರನ್ನ ಬಂಧಿಸಿ ಜೈಲಿಗಟ್ಟಲಾಗಿದೆ.
6 ಶಿಕ್ಷಕಿಯರ ಪೈಕಿ ಡ್ಯಾನ್‌ವಿಲ್ಲೆ ಪಟ್ಟಣದ ಎಲ್ಲೆನ್ ಶೆಲ್ (38) ಎಂಬಾಕೆ ತಾನು ಕೆಲಸ ಮಾಡುತ್ತಿದ್ದ ಶಾಲೆಯಲ್ಲಿ 16 ವರ್ಷದ ಇಬ್ಬರು ಹುಡುಗರೊಂದಿಗೆ ಮೂರು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದಾಳೆ.
ಇದು ಆಕೆಯ ವಿರುದ್ಧ 3ನೇ ಬಾರಿ ಕೇಳಿ ಬರುತ್ತಿರುವ ಅತ್ಯಾಚಾರದ ಆರೋಪ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ. ಸದ್ಯ ಆಕೆಯನ್ನ ಗ್ಯಾರಾರ್ಡ್ ಕೌಂಟಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.





