March 23, 2026

ಮಾಜಿ ಸಂಸದ ಅತೀಕ್‌ ಅಹ್ಮದ್‌, ಸಹೋದರನ ಗುಂಡಿಟ್ಟು ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ

0
image_editor_output_image-2054485242-1681687145726.jpg

ಲಕ್ನೋ: ಮಾಜಿ ಸಂಸದ ಅತೀಕ್‌ ಅಹ್ಮದ್‌ ಹಾಗೂ ಆತನ ಸಹೋದರನನ್ನು ಪೊಲೀಸರ ಎದುರೇ ಗುಂಡಿಟ್ಟು ಹತ್ಯೆಗೈದವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಹತ್ಯೆ ಮಾಡಿದ ಆರೋಪಿಗಳಾದ ಲವ್ಲೇಶ್‌ ತೆವಾರಿ, ಸನ್ನಿ ಸಿಂಗ್‌, ಅರುಣ್‌ ಮೌರ್ಯ ಮೂವರನ್ನು ಪೊಲೀಸರು ಕೋರ್ಟ್‌ ಮುಂದೆ ಹಾಜರು ಪಡಿಸಿದ್ದರು. ಅವರಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಅಹ್ಮದ್ ಗ್ಯಾಂಗ್ ಅನ್ನು ನಿರ್ಮೂಲನೆ ಮಾಡುವ ಮೂಲಕ ತಾವು ಹೆಸರು ಗಳಿಸಲು ಬಯಸಿದ್ದೇವೆ ಎಂದು ಮೂವರು ದುಷ್ಕರ್ಮಿಗಳು ಹೇಳಿಕೊಂಡಿದ್ದಾರೆ. ಅವರು ಕೊಲೆಯನ್ನು ಎಚ್ಚರಿಕೆಯಿಂದ ಯೋಜಿಸಿದ್ದರು. ಶನಿವಾರ ಇಡೀ ದಿನ ಪೊಲೀಸರ ವಶದಲ್ಲಿದ್ದ ಅಹ್ಮದ್‌ನನ್ನು ಹಿಂಬಾಲಿಸಿದ್ದರು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!