February 2, 2026

ಉಳ್ಳಾಲ: ಸಿಎಂ ಭೇಟಿ ಹಿನ್ನೆಲೆ: ಬಂದೋಬಸ್ತ್‌‌‌ನಲ್ಲಿದ್ದ ಸಂಚಾರಿ ಪೇದೆಗೆ ಟೆಂಪೋ ಢಿಕ್ಕಿಯಾಗಿ ಗಂಭೀರ

0
IMG-20230306-WA0037.jpg

ಉಳ್ಳಾಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಳ್ಳಾಲದ ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಹಿನ್ನೆಲೆ ರಾ.ಹೆ.66 ರಲ್ಲಿ ಬಂದೋಬಸ್ತ್ ನಲ್ಲಿದ್ದ ಕಂಕನಾಡಿ ಸಂಚಾರಿ ಠಾಣೆ ಪೊಲೀಸ್ ಪೇದೆಗೆ ಟೆಂಪೋ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿರುವ ಘಟನೆ ಆಡಂಕುದ್ರು ಬಳಿ ಸಂಭವಿಸಿದೆ.

ಮಂಜುನಾಥ ಹೆಗಡೆ ಗಂಭೀರ ಗಾಯಗೊಂಡವರು. ರಾ.ಹೆ66 ರಲ್ಲಿ ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ವಾಹನಗಳನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದ್ದರು. ಈ ವೇಳೆ ತಲಪಾಡಿ ಕಡೆಗೆ ತೆರಳುತ್ತಿದ್ದ ಟೆಂಪೋವೊಂದರ ಚಾಲಕನ ನಿಯಂತ್ರಣ ಕಳೆದು ಪೊಲೀಸ್ ಪೇದೆಗೆ ಢಿಕ್ಕಿ ಹೊಡೆದಿದೆ. ತಲೆ ಹಾಗು ಕೈಗಳಿಗೆ ಗಾಯಗೊಂಡ ಪೇದೆಯನ್ನು ನಗರದ ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!