August 21, 2026

ಸಂಬಳ ಕೇಳಿದ್ದಕ್ಕೆ ಕಾರ್ಮಿಕನ ಕೈಯನ್ನೇ ಕತ್ತರಿಸಿದ ಮಾಲಕ

0
image_editor_output_image1826775552-1637559713559.jpg

ಭೋಪಾಲ್: ಕಾರ್ಮಿಕನೊಬ್ಬ ತನ್ನ ಬಾಕಿ ಕೂಲಿಯನ್ನು ಕೇಳಿದ್ದಕ್ಕೆ ಆಕ್ರೋಶಗೊಂಡ ಮಾಲೀಕ ಆತನ ಕೈಯನ್ನೇ ಕತ್ತರಿಸಿ ಹಾಕಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ರೇವಾ ಜಿಲ್ಲಾ ಕೇಂದ್ರದಿಂದ 40 ಕಿ.ಮೀ. ದೂರದಲ್ಲಿರುವ ಸಿರ್ಮೌರ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಡೊಲ್ಮಾವು ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಕಾರ್ಮಿಕನೊಬ್ಬ ತನ್ನ ಬಾಕಿ ಕೂಲಿಯನ್ನು ಕೇಳಿದ್ದಕ್ಕೆ ಮಾಲೀಕರು ಆತನ ಕೈ ಕತ್ತರಿಸಿದ್ದಾರೆ. ಸಂತ್ರಸ್ತ ಕೂಲಿ ಕಾರ್ಮಿಕ ಅಶೋಕ್‌ ಸಾಕೇತ್‌, ಪಾಡ್ರಿ ಗ್ರಾಮದ ನಿವಾಸಿಯಾಗಿದ್ದು ಈ ಮೊದಲು ಡೊಲ್ಮಾವು ಗ್ರಾಮದ ಗಣೇಶ ಮಿಶ್ರಾ ಅವರ ನಿರ್ಮಾಣ ಕೆಲಸದಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದರು.

ಬಾಕಿ ಕೂಲಿಯ ಸಂಬಂಧ ಸಾಕೇತ್‌ ಮತ್ತು ಮಿಶ್ರಾ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ಮಾತು ವಿಕೋ‍ಪಕ್ಕೆ ತಿರುಗಿ ಮಿಶ್ರಾ ಮತ್ತು ಆತನ ಕಡೆಯವರು ಹರಿತ ಆಯುಧದಿಂದ ಸಾಕೇತ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಮಾಲೀಕ ಮಿಶ್ರಾ ಹರಿತವಾದ ಆಯುಧದಿಂದ ಸಾಕೇತ್‌ ಕೈ ಕತ್ತರಿಸಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!