‘ನಾವೇ ಎಲ್ಲ’ ಎನ್ನುತ್ತಿದ್ದವರಿಗೆ ‘ನೀವೇನೂ ಅಲ್ಲ’ ಎನ್ನುತ್ತಿದೆ ಮೋದಿ-ಶಾ ಜೋಡಿ: ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕಾ ಪ್ರಹಾರ
ಬೆಂಗಳೂರು: “ನಾವೇ ಎಲ್ಲ” ಎನ್ನುತ್ತಿದ್ದವರಿಗೆ “ನೀವೇನೂ ಅಲ್ಲ” ಎನ್ನುತ್ತಿದೆ ಮೊ-ಶಾ ಜೋಡಿ. ಗೊಡ್ಡು ಹಸುಗಳನ್ನು ಗೋಶಾಲೆಗಾದರೂ ಬಿಡಬಹುದಿತ್ತು, ಆದರೆ ನೇರ ಕಸಾಯಿಖಾನೆಗೇ ಕಳಿಸುತ್ತಿರುವುದು ದುರಂತ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ರಾಜ್ಯ ಬಿಜೆಪಿಯ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ ಅವರು ಚುನಾವಣಾ ರಾಜಕೀಯದಿಂದ ದೂರು ಸರಿಯುವ ನಿರ್ಧಾರ ಪ್ರಕಟಿಸುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದೆ.
ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್.. ಬಿಜೆಪಿ ಎಂಬ ಕಳೆಗೆ ನೀರು ಗೊಬ್ಬರ ಹಾಕಿ ಬೆಳೆಸಿದ ನಾಯಕರನ್ನು ಅಗೌರವದ ನಿರ್ಗಮನ ದಾರಿ ತೋರಿಸಿದೆ ಬಿಜೆಪಿ. “ನಾವೇ ಎಲ್ಲ” ಎನ್ನುತ್ತಿದ್ದವರಿಗೆ “ನೀವೇನೂ ಅಲ್ಲ” ಎನ್ನುತ್ತಿದೆ ಮೊ-ಶಾ ಜೋಡಿ. ಗೊಡ್ಡು ಹಸುಗಳನ್ನು ಗೋಶಾಲೆಗಾದರೂ ಬಿಡಬಹುದಿತ್ತು, ಆದರೆ ನೇರ ಕಸಾಯಿಖಾನೆಗೇ ಕಳಿಸುತ್ತಿರುವುದು ದುರಂತ ಎಂದು ಟ್ವೀಟಾಸ್ತ್ರ ಪ್ರಯೋಗಿಸಿದೆ.




