September 3, 2026

ಬಂಟ್ವಾಳ: ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಚುನಾವಣಾ ಕಚೇರಿ ನಾಳೆ ಉದ್ಘಾಟನೆ
 

0
71033484.jpg

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ರಮಾನಾಥ ರೈ ಅವರ ಚುನಾವಣಾ ಪ್ರಚಾರ ಕಚೇರಿ ಉದ್ಘಾಟನೆ ಏ.12 ರ ಬುಧವಾರ ಬೆಳಗ್ಗೆ 9ಗಂಟೆಗೆ ನಡೆಯಲಿದೆ.

ಬಿ.ಸಿ ರೋಡ್ ಪದ್ಮ ಪೆಟ್ರೋಲ್ ಬಂಕ್ ಮುಂಭಾಗದಲ್ಲಿರುವ ಧನಲಕ್ಷ್ಮಿ ಕಾಂಪ್ಲೆಕ್ಸ್ ನಲ್ಲಿ ರೈ ಅವರ ನೂತನ ಕಚೇರಿ ಉದ್ಘಾಟನೆಯಾಗಲಿದೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಕ್ಷದ ವಿವಿಧ ಸಮುದಾಯದ ಹಿರಿಯ ಮುಖಂಡರು, ಕಚೇರಿ ಉದ್ಘಾಟಿಸಲಿದ್ದಾರೆ.

ಅಭ್ಯರ್ಥಿ ಬಿ ರಮಾನಾಥ ರೈ, ಪಕ್ಷದ ವರಿಷ್ಟರು, ಬ್ಲಾಕ್ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ ಎಂದು ಪಕ್ಷದ ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!