RSS ಫಿಸಿಕಲ್ ಟ್ರೈನರ್ ನ ಮೃತದೇಹ ಕೆರೆಯಲ್ಲಿ ಪತ್ತೆ
ಬಾಗಲಕೋಟೆ: ಆರ್‌ಎಸ್‌ಎಸ್ ದೈಹಿಕ ಶಿಕ್ಷಕ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮುಧೋಳ ನಗರದಲ್ಲಿ ನಡೆದಿದೆ.
ಪ್ರಮೋದ್ ಮಮದಾಪುರ (44) ಮೃತ ವ್ಯಕ್ತಿ. ಇವರು ಜಮಖಂಡಿ ಭಾಗದ ಆರ್‌ಎಸ್‌ಎಸ್ ದೈಹಿಕ ಶಿಕ್ಷಕರಾಗಿದ್ದರು. ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ದಂಡ ಪ್ರಹಾರ, ಕರಾಟೆ ಸೇರಿದಂತೆ ದೈಹಿಕ ಶಿಕ್ಷಣ ತರಬೇತಿ ನೀಡುತ್ತಿದ್ದರು.
ನವರಾತ್ರಿ ಆರಂಭದಲ್ಲಿ ಅನುಷ್ಠಾನಕ್ಕೆ ಕೂಡ್ತೀನಿ. ಯಾರೂ ಕರೆ ಮಾಡಬೇಡಿ ಎಂದು ಫೋನ್ ಸ್ವಿಚ್ ಆಪ್ ಮಾಡಿ ನಾಪತ್ತೆಯಾಗಿದ್ದರು. ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




