February 3, 2026

ಉಡುಪಿ: ನಿಲ್ಲಿಸಿದ್ದ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗಾಹುತಿ: ಸಂಪೂರ್ಣ ಸುಟ್ಟು ಭಸ್ಮ

0
IMG-20230410-WA0049.jpg

ಉಡುಪಿ: ಶಂಕರಪುರದ ರೈತ ಜೋಸೆಫ್ ಲೋಬೊ ಅವರ ಮನೆಯಲ್ಲಿ ನಿಲ್ಲಿಸಲಾಗಿದ್ದ ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಏಪ್ರಿಲ್ 10 ಸೋಮವಾರ ನಡೆದಿದೆ.

ಈ ಘಟನೆಯನ್ನು ಕುಟುಂಬಸ್ಥರು ವಿಡಿಯೋದಲ್ಲಿ ಸೆರೆ ಹಿಡಿದಿದ್ದು, ಬೆಂಕಿಯಿಂದಾಗಿ ಸ್ಕೂಟರ್‌ನ ಸಮೀಪದಲ್ಲಿದ್ದ ವಸ್ತುಗಳಿಗೂ ಹಾನಿಯಾಗಿದೆ.

ಇನ್ನು ಬಿಸಿಲಿನ ಬೇಗೆಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ.

ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!