February 3, 2026

ಖಾಸಗಿ ಬಸ್ ಪಲ್ಟಿ: ಓರ್ವ ಸಾವು, ಹಲವರಿಗೆ ಗಂಭೀರ ಗಾಯ

0
image_editor_output_image-1535030967-1681084203485.jpg

ಯಾದಗಿರಿ: ಖಾಸಗಿ ಬಸ್ ಪಲ್ಟಿಯಾಗಿ ಓರ್ವ ಸಾವನ್ನಪ್ಪಿ, ಹಲವರಿಗೆ ಗಂಭೀರ ಗಾಯವಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕವಡಿಮಟ್ಟಿ ಗ್ರಾಮದ ಬಳಿ ಭಾನುವಾರ ಮುಂಜಾನೆ ನಡೆದಿದೆ.

ಖಾಸಗಿ ಬಸ್‌ನಲ್ಲಿ 30ಕ್ಕೂ ಹೆಚ್ಚು ಜನ ಪ್ರಯಾಣಿಕರಿದ್ದು, ಬಸ್ ಬೆಂಗಳೂರಿನಿಂದ ಸುರಪುರ ಮಾರ್ಗವಾಗಿ ಹುಮ್ನಾಬಾದ್ ಕಡೆ ಚಲಿಸುತ್ತಿತ್ತು.

ಬಸ್ ಓವರ್ ಸ್ಪೀಡ್ ಇದ್ದ ಕಾರಣ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕವಡಿಮಟ್ಟಿ ಬಳಿ ಪಲ್ಟಿಯಾಗಿದೆ.

ಬಸ್ ಪಲ್ಟಿಯಾದ ಸುದ್ದಿ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ಬಸ್‌ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಹೊರ ತೆಗೆದಿದ್ದಾರೆ. ಬಸ್ ಪಲ್ಟಿಯ ರಭಸಕ್ಕೆ ಕೆಲವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ.

Leave a Reply

Your email address will not be published. Required fields are marked *

error: Content is protected !!