ಮಂಗಳೂರು: ಗುಡ್ ಫ್ರೈಡೆ ನಿಮಿತ್ತ ಚರ್ಚ್‌ಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿ ನಗ-ನಗದು ಕಳವು
ಮಂಗಳೂರು: ಗುಡ್ ಫ್ರೈಡೆ ನಿಮಿತ್ತ ಚರ್ಚ್‌ಗೆ ತೆರಳಿದ್ದ ವೇಳೆ ಮನೆಯೊಂದಕ್ಕೆ ಕನ್ನ ಹಾಕಿದ್ದ ಕಳ್ಳರು 1.20 ಲಕ್ಷ ರೂ ಮೌಲ್ಯದ ಹಾಗೂ ನಗದು ಕಳವು ಮಾಡಿದ ಘಟನೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಏ.7 ರಂದು ಗುಡ್‌ಫ್ರೈಡೇ ನಿಮಿತ್ತ ಸಂಜೆ 5.45 ಗಂಟೆಗೆ ಪ್ರವೀಣ್ ಮೊಂತೇರೋ ಅವರು ಪಾಲ್ದನೆ ಚರ್ಚ್‌ಗೆ ಕುಟುಂಬ ಸಮೇತರಾಗಿ ತೆರಳಿದ್ದರು.
ಪ್ರಾರ್ಥನೆ ಮುಗಿಸಿ ರಾತ್ರಿ 7.45 ಗಂಟೆಗೆ ಮನೆಗೆ ಬಂದು ಬೀಗ ತೆರೆದು ನೋಡಿದಾಗ ಯಾರೋ ಕಳ್ಳರು ಮನೆಯ ಹಂಚಿನ ಛಾವಣಿಯ ಹಂಚುಗಳನ್ನು ತೆಗೆದು ಮನೆ ಒಳಗಡೆ ಪ್ರವೇಶಿಸಿದ್ದಾರೆ.
ಪ್ರವೀಣ್ ತಾಯಿ ಕೋಣೆಯಲ್ಲಿ ಬೀಗ ಹಾಕಿದ್ದ ಕಬ್ಬಿಣದ ಕಪಾಟಿನ ಬಾಗಿಲುಗಳನ್ನು ಮುರಿದು ಅಂದಾಜು 20 ಗ್ರಾಂ ಬಂಗಾರದ ಚೈನ್ ಮತ್ತು 8 ಗ್ರಾಂ ನ ಬಂಗಾರದ ಒಂದು ಜೊತೆ ಬೆಂಡೋಲೆ, 4 ಗ್ರಾಂ ನ ಒಂದು ಬಂಗಾರದ ಉಂಗುರ ಮತ್ತು ಪ್ರವೀಣ್ ಕೋಣೆಯ ಕವಾಟಿನಲ್ಲಿರಿಸಿದ್ದ ಪಿಗ್ಗಿ ಬಾಕ್ಸ್ ನಲ್ಲಿದ್ದ ಅಂದಾಜು 4 ಸಾವಿರ ರೂಪಾಯಿ ನಗದು ಹಣ ವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
ಕಳವಾದ ಒಟ್ಟು ಬಂಗಾರದ ಅಂದಾಜು ಮೌಲ್ಯ 1 ಲಕ್ಷ 20 ಸಾವಿರ ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




