February 3, 2026

ವಿಟ್ಲ: ಕೆಲಿಂಜ ಸರಕಾರಿ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ: ಪ್ರತಿಭಾ ಪುರಸ್ಕಾರ, ಕೆ.ಜಿ ಮಕ್ಕಳ ಅಭಿಯಾನ, ಸ್ಪೋಕನ್ ಇಂಗ್ಲೀಷ್ ತರಗತಿ ಉದ್ಘಾಟನೆ

0
IMG-20230409-WA0020.jpg

ವಿಟ್ಲ; ಕೆಲಿಂಜ ಸರಕಾರಿ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ, ಮಕ್ಕಳ ಪ್ರತಿಭಾ ಪುರಸ್ಕಾರ, ಕೆ.ಜಿ ಮಕ್ಕಳ ಅಭಿಯಾನ ಕಾರ್ಯಕ್ರಮ, ಸ್ಪೋಕನ್ ಇಂಗ್ಲೀಷ್ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ
ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ ಅಧ್ಯಕ್ಷತೆ ವಹಿಸಿ, ಮಾತನಾಡಿ ಎಲ್ಲರ ಸಹಕಾರದಲ್ಲಿ ಇಂದು ಈ ಶಾಲೆ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಹಿರಿಯ ವಿದ್ಯಾರ್ಥಿಗಳ ಸಹಕಾರ ಅಗತ್ಯವಾಗಿದೆ ಎಂದರು.

ವಿಟ್ಲ ಲಯನ್ಸ್ ಕ್ಲಬ್ ನ ಅಧ್ಯಕ್ಷ ಸುದೇಶ್ ಭಂಡಾರಿ ಮಾತನಾಡಿ ಇಂಗ್ಲೀಷ್ ಭಾಷೆಗಳ ವ್ಯಾಮೋಹದಿಂದಾಗಿ ಸರಕಾರಿ ಶಾಲೆಗಳು ಮುಚ್ಚು ಹಂತಕ್ಕೆ ತಲುಪಿದೆ. ಅವುಗಳನ್ನು ಉಳಿಸುವ ಕಾರ್ಯ ಆಗಬೇಕು ಎಂದರು.

ವಿಟ್ಲ ಜೇಸಿಐ ಅಧ್ಯಕ್ಷ ಪರಮೇಶ್ವರ ಹೆಗಡೆ ಅವರು ಮಾತನಾಡಿ ಶುಭ ಹಾರೈಸಿದರು.

ಬಾಬು ಗೌಡ, ಮೊಹಮ್ಮದ್ ಶರೀಪ್, ಅವರನ್ನು ಸನ್ಮಾನಿಸಲಾಯಿತು. ಹೊಸ ದಾಖಲಾತಿ ಹೊಂದಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಾಲೆಗೆ ದೇಣಿಗೆ ನೀಡಿದ ಎಲ್ಲಾ ದಾನಿಗಳನ್ನು ಇದೇ ಸಂದರ್ಭ ಗೌರವಿಸಲಾಯಿತು.

ವಿಟ್ಲ ಜೇಸಿಐ ಅಧ್ಯಕ್ಷ ಪರಮೇಶ್ವರ ಹೆಗಡೆ, ಹಳೆ ವಿದ್ಯಾರ್ಥಿ ಸಂಘ ಉಪಾಧ್ಯಕ್ಷ ಹಮೀದ್ ಜಿ.ಎಸ್, ಹಮೀದ್ ಗೂಳಿಗದ್ದೆ, ಕಾರ್ಯದರ್ಶಿ ಸಂತೋಷ್ ಶೆಟ್ಟಿ ಶೀನಾಜೆ, ಹೊನ್ನಪ್ಪ ಗೌಡ ಕೆಲಿಂಜ, ಮೋಹಿತ್ ಶೆಟ್ಟಿ ಮಾಡದಾರು, ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಜಯಂತಿ, ನಾರಾಯಣ ಭಟ್ ಪುಂಡಿಕಾಯಿ, ಚಿತ್ತರಂಜನ್, ಡಾ. ರವಿಕಿರಣ್, ನಿವೃತ್ತ ಸೈನಿಕ ದಾಸಪ್ಪ, ಸಿಆರ್ ಪಿ ಜ್ಯೋತಿ ಉಪಸ್ಥಿತರಿದ್ದರು.

ಮುಖ್ಯಶಿಕ್ಷಕ ಬಿ ತಿಮ್ಮಪ್ಪ ನಾಯ್ಕ ಸ್ವಾಗತಿಸಿದರು. ಉಷಾ ಸುವರ್ಣ ವಂದಿಸಿದರು. ಮಂಜುಳಾ ನಿರೂಪಿಸಿದರು. ಗಾಯತ್ರಿ ನಳಿನಾಕ್ಷಿ, ಪ್ರಣೀತ್ ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!