September 19, 2024

ಮಂಗಳೂರು ಉತ್ತರ, ದಕ್ಷಿಣ, ಪುತ್ತೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಫೈನಲ್: ಇನಾಯತ್ ಅಲಿ, ಲೋಬೋ, ಶಕುಂತಳಾ ಶೆಟ್ಟಿ ಹೆಸರು ಅಂತಿಮಗೊಳಿಸಿದ ಕಾಂಗ್ರೆಸ್

0

ಬೆಂಗಳೂರು: ಕರಾವಳಿಯಲ್ಲಿ ತೀವ್ರ ಕುತೂಹಲ ಮೂಡಿಸಿದ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಹಾಗೂ ಪುತ್ತೂರು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಖನ್ನು ಅಂತಿಮಗೊಳಿಸಲಾಗಿದೆ. ಉತ್ತರದಿಂದ ಇನಾಯತ್ ಆಲಿ, ದಕ್ಷಿಣದಿಂದ ಜೆ. ಆರ್. ಲೋಬೋ ಹಾಗೂ ಪುತ್ತೂರಿನಿಂದ ಶಕುಂತಳಾ ಶೆಟ್ಟಿ ಹೆಸರು ಅಂತಿಮ ಗೊಳಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಮಂಗಳೂರು ದಕ್ಷಿಣ ಹಾಗೂ ಪುತ್ತೂರಿಗೆ ಹಳೆ ಮುಖಗಳಾದ ಮಾಜಿ ಶಾಸಕರಾದ ಜೆ.ಆರ್. ಲೋಬೋ ಹಾಗೂ ಶಕುಂತಳಾ ಶೆಟ್ಟಿ ಅವರನ್ನು ಕಣಕ್ಕಿಳಿಸಲಾಗಿದೆ. ಆದರೆ ಮಂಗಳೂರು ಉತ್ತರಕ್ಕೆ ಹೊಸಮುಖಕ್ಜೆ ಮಣೆ ಹಾಕಲಾಗಿದೆ. ಇಲ್ಲಿ ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಆಲಿ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಮಂಗಳೂರು ಉತ್ತರ ಮತ್ತು ದಕ್ಷಿಣ ಕ್ಷೇತ್ರಕ್ಕೆ ಮಾಜಿ ಶಾಸಕರು, ಮಾಜಿ ಮೇಯರ್ ಗಳು, ಕಾರ್ಪೋರೇಟರ್ ಸೇರಿದಂತೆ ಡಜನಿಗೂ ಅಧಿಕ ಮಂದಿ ಆಕಾಂಕ್ಷಿಗಳಿದ್ದರು. ಮಂಗಳೂರಿನ ಯುವ ನ್ಯಾಯವಾದಿ, ಸಾಮಾಜಿಕ ಧುರೀಣ ಪದ್ಮರಾಜ್ ಅವರು ಕೂಡ ಮಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ವಿಷಯ ಎತ್ತಿಕೊಂಡು ಅಲ್ಪ ಸಂಖ್ಯಾತ ಕ್ರೈಸ್ತ ಸಮುದಾಯದ ಜೆ. ಆರ್. ಲೋಬೊ ಅವರಿಗೆ ಮತ್ತೆ ಟಿಕೆಟ್ ನೀಡಿದೆ. ಹಾಗೆ ಪುತ್ತೂರು ಕ್ಷೇತ್ರವನ್ನು ಮಹಿಳೆಯರಿಗೆ ಬಿಟ್ಟು ಕೊಟ್ಟಿದೆ. ಇಲ್ಲಿ ಶಕುಂತಳಾ ಶೆಟ್ಟಿ ಅವರಿಗೆ ಮತ್ತೆ ಅವಕಾಶ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!