March 23, 2026

ಮತದಾರರಿಗೆ ಗಿಫ್ಟ್ ಬಾಕ್ಸ್  ಹಂಚಿ ಆಮಿಷ: ಕಾಂಗ್ರೆಸ್ ಅಭ್ಯರ್ಥಿ ಕುಸುಮಾ, ಸಂಸದ ಡಿ.ಕೆ ಸುರೇಶ್ ವಿರುದ್ಧ ಎಫ್‌ಐಆರ್

0
image_editor_output_image-1792970471-1680896972796.jpg

ಬೆಂಗಳೂರು: ಮತದಾರರಿಗೆ ಗಿಫ್ಟ್ ಬಾಕ್ಸ್ ಹಂಚಿ ಆಮಿಷವೊಡ್ಡುತ್ತಿದ್ದ ಆರೋಪದ ಮೇಲೆ ಆರ್‌ಆರ್ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಹಾಗೂ ಸಂಸದ ಡಿ.ಕೆ ಸುರೇಶ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಆರ್‌ಆರ್ ನಗರದ ಬಿಬಿಎಂಪಿ ಕಚೇರಿ ಬಳಿ ಮತದಾರರಿಗೆ ತವಾ ಬಾಕ್ಸ್ ಹಂಚಿಕೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಫ್ಲೈಯಿಂಗ್ ಸ್ಕ್ವಾಡ್‌ ಅಧಿಕಾರಿ ಸುರೇಶ್ ಸ್ಥಳಕ್ಕೆ ತೆರಳಿದಾಗ, ತವಾ ಹಂಚುತ್ತಿದ್ದವರಲ್ಲಿ ಇಬ್ಬರು ಓಡಿಹೋಗಿದ್ದು, ಓರ್ವ ಸಿಕ್ಕಿಬಿದ್ದಿದ್ದಾನೆ.

ಗಿಫ್ಟ್ ಬಾಕ್ಸ್‌ಗಳ ಮೇಲೆ ಕುಸುಮಾ ಹಾಗೂ ಡಿ.ಕೆ ಸುರೇಶ್ ಭಾವಚಿತ್ರಗಳಿದ್ದು, ಅವುಗಳನ್ನ ಸೀಜ್‌ ಮಾಡಲಾಗಿದೆ. ಈ ಬಗ್ಗೆ ಆರ್‌ಆರ್ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!