August 12, 2026

ನಿರ್ಜನ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

0
image_editor_output_image-1239490427-1680822550899.jpg

ಆನೇಕಲ್: ಮದುವೆಯಾಗಿದ್ದರೂ ಗಂಡನಿಂದ ದೂರವಾಗಿದ್ದ ವಿವಾಹಿತೆಯೊಬ್ಬಳು ಮತ್ತೊಬ್ಬನನ್ನ ಮದುವೆಯಾಗಿ ರಾಜರೋಷವಾಗಿ ಓಡಾಡಿಕೊಂಡಿದ್ದಳು. ಕೊನೆಗೆ ಅವನಿಂದಲೇ ಕೊಲೆಯಾಗಿರುವ ಘಟನೆ ಆನೇಕಲ್ ತಾಲೂಕಿನ ಹೆಬ್ಬಗೋಡಿ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೆಬ್ಬಗೋಡಿ ವ್ಯಾಪ್ತಿಯ ಸಿಂಗೇನ ಅಗ್ರಹಾರ ನಿರ್ಜನ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಮಂಜುಳಾ (32) ಎಂದು ಗುರುತಿಸಲಾಗಿದೆ.

ಕೆಲ ದಿನಗಳ ಹಿಂದೆಯಷ್ಟೇ ಮಂಜುಳಾ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಇತ್ತೀಚೆಗೆ 2ನೇ ಪತಿ ನಾರಾಯಣ ಜೊತೆ ಹೊರಗೆ ಹೋಗಿದ್ದ ಮಂಜುಳಾ ಮತ್ತೆ ವಾಪಸ್ ಬಂದಿರಲಿಲ್ಲ.

ಇದರಿಂದ ಅನುಮಾನಗೊಂಡಿದ್ದ ಕುಟುಂಬಸ್ಥರು ಹೆಬ್ಬಗೋಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಿರ್ಜನ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತದೇಹ ದೊರೆತಾಗ ಗುರುತು ಪತ್ತೆಗಾಗಿ ಮಂಜುಳಾ ತಂಗಿ ಲಕ್ಷ್ಮಿಯನ್ನ ಕರೆಸಲಾಗಿತ್ತು. ಆಕೆ ಕಿವಿಯೋಲೆ, ಕೊರಳಲ್ಲಿದ್ದ ಸರ ನೋಡಿ ಗುರುತು ಪತ್ತೆಹಚ್ಚಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!