March 22, 2026

ಟೋಲ್ ಬಳಿ ಬೈಕ್ ಅಪಘಾತ: ಮಹಿಳಾ ಟೆಕ್ಕಿ ಮೃತ್ಯು

0
image_editor_output_image1904120386-1680504510666.jpg

ಬೆಂಗಳೂರು: ಹೊಸಕೆರೆಹಳ್ಳಿ ನೈಸ್ ರಸ್ತೆ ಟೋಲ್ ಬಳಿ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳಾ ಟೆಕ್ಕಿ ಮೃತಪಟ್ಟಿದ್ದಾರೆ.

ಸುಲೋಚನ ಮೃತ ದುರ್ದೈವಿ. ಆನಂದ್ ಮತ್ತು ಸುಲೋಚನ ಕೋರಮಂಗಲದ ಖಾಸಗಿ ಕಂಪನಿಯಲ್ಲಿ ಸಾಫ್ಟ್‍ವೇರ್ ಎಂಜಿನಿಯರ್ಸ್ ಆಗಿದ್ದರು. ಆನಂದ್ ಫುಲ್ ಹೆಲ್ಮೆಟ್ ಹಾಕಿದ್ರೆ, ಸುಲೋಚನ ಹಾಫ್ ಹೆಲ್ಮೆಟ್ ಹಾಕಿದ್ದರು.

ಶನಿವಾರ ಕೆಲಸ ಮುಗಿಸಿ ವಾಪಸ್ ಹೋಗುವ ವೇಳೆ ನೈಸ್ ರಸ್ತೆಯಲ್ಲಿ ಡಿವೈಡರ್ ಗೆ ಬೈಕ್ ಡಿಕ್ಕಿ ( ಹೊಡೆದಿತ್ತು. ಈ ವೇಳೆ ಇಬ್ಬರಿಗೂ ಗಂಭೀರ ಸ್ವರೂಪದ ಗಾಯವಾಗಿತ್ತು. ಇದೀಗ ಗಂಭೀರವಾಗಿ ಗಾಯಗೊಂಡಿದ್ದ ಸುಲೋಚನ ಚಿಕಿತ್ಸೆ ಫಲಕಾರಿಯಾದೇ ಸಾವನ್ನಪ್ಪಿದ್ದಾರೆ.

ಯುವಕನ ಸ್ಥಿತಿ ಕೂಡ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಕೆಂಗೇರಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!