April 11, 2025

ಮಹಾನಗರ ಪಾಲಿಕೆಯ ಕಟ್ಟಡಕ್ಕೆ ಬೆಂಕಿ ಅವಘಡ: ಲೆಕ್ಕಪತ್ರ ಶಾಖೆಯಲ್ಲಿದ್ದ ಮಹತ್ವದ ದಾಖಲೆಗಳು ಭಸ್ಮ

0

ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯ ಹಳೆ ಕಟ್ಟಡಕ್ಕೆ ಶಾರ್ಟ್ ಸರ್ಕಿಟ್‌ನಿಂದ ಶನಿವಾರ ಬೆಂಕಿ ಬಿದ್ದಿದ್ದು, ಲೆಕ್ಕಪತ್ರ ಶಾಖೆಯಲ್ಲಿದ್ದ ಮಹತ್ವದ ದಾಖಲೆಗಳು ಭಸ್ಮವಾಗಿವೆ ಎಂದು ಗೊತ್ತಾಗಿದೆ.

ಹಳೆ ಕಟ್ಟಡದ ಮೊದಲ ಮಹಡಿಯನ್ನು ಕೆಲ ವರ್ಷಗಳಿಂದ ಬಳಸುತ್ತಿರಲಿಲ್ಲ. ಅಲ್ಲಿ ಲೆಕ್ಕಪತ್ರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇರಿಸಲಾಗಿತ್ತು.

ಈ ಕಟ್ಟಡವನ್ನು ವಿಧಾನಸಭೆ ಚುನಾವಣೆ ಪ್ರಯುಕ್ತ ಕಲಬುರಗಿ ದಕ್ಷಿಣ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕೊಠಡಿಗೆ ವಿದ್ಯುತ್ ಸಂಪರ್ಕ ನೀಡಲಾಗುತ್ತಿತ್ತು.

 

 

ಬೆಂಕಿ ಹೊತ್ತಿಕೊಂಡಿದ್ದರಿಂದ ಕೊಠಡಿಯಲ್ಲಿದ್ದ ಪೀಠೋಪಕರಣಗಳು, ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!