ಕಂಬಳಬೆಟ್ಟು ಜಮಾಅತ್ ಕಮಿಟಿ ವತಿಯಿಂದ “ನಮ್ಮ ಮಕ್ಕಳು ನಮ್ಮ ಸಂಪತ್ತು, ನಮ್ಮ ಮಕ್ಕಳ ನಡೆ ನಮ್ಮೂರ ದರ್ಸ್ ಕಡೆ” ಅಭಿಯಾನದ ಪೋಸ್ಟರ್ ಬಿಡುಗಡೆ
ಕಂಬಳಬೆಟ್ಟು ಮುಹಿಯುದ್ದೀನ್ & ಇಬ್ರಾಹಿಂ ಜಮಾತ್ ಕಮಿಟಿ(ರಿ.) ಇದರ ವತಿಯಿಂದ “ನಮ್ಮ ಮಕ್ಕಳು ನಮ್ಮ ಸಂಪತ್ತು ನಮ್ಮ ಮಕ್ಕಳ ನಡೆ ನಮ್ಮೂರ ದರ್ಸ್ ಕಡೆ” ಎಂಬ ಶೀರ್ಷಿಕೆಯಡಿ, ದರ್ಸ್ ವಿದ್ಯಾಭ್ಯಾಸದ ದಾಖಲಾತಿ ಅಭಿಯಾನದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಕಮಿಟಿಯ ಅಧ್ಯಕ್ಷರಾದ ಡಾ. ಅಬ್ದುಲ್ ಬಶೀರ್ ವಿ ಕೆ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ದಾರಿ ತಪ್ಪುತ್ತಿರುವ ಯುವ ಸಮೂಹವನ್ನು ಸಮಾಜದ ಉತ್ತಮ ವ್ಯಕ್ತಿಗಳನ್ನಾಗಿ ಪರಿವರ್ತಿಸಲು ಈ ಅಭಿಯಾನವು ಸಹಕಾರಿಯಾಗಲಿದೆ ಎಂದರು. ಊರಿನ ಹಾಗೂ ಸುತ್ತಮುತ್ತಲಿನ ಮೊಹಲ್ಲಾದ ಮದರಸ ವಿದ್ಯಾಭ್ಯಾಸ ಮುಗಿಸಿದ ಹಾಗೂ ಮದರಸ ವಿದ್ಯಾಭ್ಯಾಸವನ್ನು ಅರ್ಧದಲ್ಲಿ ನಿಲ್ಲಿಸಿದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುವಂತೆ ಹಾಗೂ ವಿದ್ಯಾರ್ಥಿಗಳ ಪೋಷಕರು ಸಹಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಮಿಟಿಯ ಉಪಾಧ್ಯಕ್ಷರು ಮಹಮೂದ್ ಕೆಮ್ಮಾಯಿ, ಪ್ರಧಾನ ಕಾರ್ಯದರ್ಶಿ ನಾಸಿರ್ ಅಲಾದಿನಗರ, ಕೋಶಾಧಿಕಾರಿ ಅಬೂಬಕರ್ ನಕ್ಕರೆ, ಜೊತೆ ಕಾರ್ಯದರ್ಶಿ ಅಬ್ದುಲ್ ಗಫೂರ್ ಹಾಗೂ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.





