ಅರಳ ವಲಯ ಕಾಂಗ್ರೆಸ್ ಸಮಿತಿ ಇದರ ನೂತನ ಅಧ್ಯಕ್ಷರಾಗಿ ಅಬ್ದುಲ್ ಲೆತೀಫ್ ಶುಂಠಿ ಹಿತ್ತಿಲು ಆಯ್ಕೆ
ಬಂಟ್ವಾಳ ತಾಲೂಕಿನ ಅರಳ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಕಾಂಗ್ರೆಸ್ ಪಕ್ಷದ ವಲಯ ಮಟ್ಟದ ಸಭೆಯು ಇಂದು ಸಂಜೆ 4.30 ಕ್ಕೆ ಸರಿಯಾಗಿ ನಡೆಯಿತು.
ಅರಳ ವಲಯ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಸಾಮಾಜಿಕ ಸೇವೆಯಲ್ಲಿ ಸದಾ ಸಕ್ರಿಯವಾಗಿರುವ ಎಲ್ಲರಿಗೂ ಚಿರಪರಿಚಿತ ವ್ಯಕ್ತಿ ಜ ! ಅಬ್ದುಲ್ ಲೆತೀಫ್ ಶುಂಠಿ ಹಿತ್ತಿಲು ಅವಿರೋಧವಾಗಿ ಆಯ್ಕೆಯಾದರು
ಪ್ರಸ್ತುತ ಸಭೆಯಲ್ಲಿ ಬಂಟ್ವಾಳ ಬ್ಲಾಕ್ ಅಧ್ಯಕ್ಷರಾದ ಬಾಲಕೃಷ್ಣ ಅಂಚನ್, ಬಂಟ್ವಾಳ ಯೋಜನಾ ಪ್ರಾಧಿಕಾರ ಇದರ ಅಧ್ಯಕ್ಷರಾದ ಶ್ರೀ ಬೇಬಿ ಕುಂದರ್, ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮ ಶೇಖರ್ ಜೈನ್,ಅರಳ ಗ್ರಾಮ ಪಂಚಾಯತ್ ಸದಸ್ಯರಾದ ಎಮ್ ಬಿ ಅಶ್ರಫ್ ಮೂಲರಪಟ್ಣ,ಹಮೀದ ಭಾನು,ಪ್ರೇಮ, ದೇಜಪ್ಪ ಪೂಜಾರಿ,ಅರಳ ವಲಯ ಕಾಂಗ್ರೆಸ್ ಮಾಜಿ ಅಶ್ರಫ್ ಕುಟ್ಟಿಕಳ , ಸಂತೋಷ್ ಅರಳ,ಓಝ್ವಲ್ ಲೋಬೋ ಅರಳ ಮುಂತಾದವರು ಉಪಸ್ಥಿತರಿದ್ದರು ಹಲವಾರು ಕಾರ್ಯಕರ್ತರು ಹಾಜರಿದ್ದರು.





