ಮದುವೆಯಾಗಿ ಕಾರಿನಲ್ಲಿ ಹೋಗುವಾಗ ಟ್ಯಾಂಕರ್ ಢಿಕ್ಕಿ: ನವ ದಂಪತಿ ಸ್ಥಳದಲ್ಲೇ ಮೃತ್ಯು

ಮೂಡಲಗಿ: ತಾಲೂಕಿನ ಹಳ್ಳೂರ ಗ್ರಾಮದ ಗಾಂಧಿನಗರ ಬಳಿ ಇರುವ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಟ್ಯಾಂಕರ್ ಮತ್ತು ಕಾರಿನ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ನವದಂಪತಿಗಗಳು ಸ್ಥಳದಲ್ಲೇ ಸಾವನ್ನಪಿದ್ದು, ಓರ್ವ ಮಹಿಳೆ ಹಾಗೂ ಓರ್ವ ಪುರಷ ಗಂಭೀರ ಗಾಯಗೊಂಡಿ ಘಟನೆ ಶನಿವಾರದ ಸಂಜೆ ನಡೆದಿದೆ.
ಮೃತರು ಮಹಾರಾಷ್ಟ್ರ ಮೂಲದವರಾಗಿದ್ದು ಇಂದ್ರಜೀತ್ ಮೋಹನ್ ಡಮ್ಮನಗಿ(27) ಕಲ್ಯಾಣಿ ಡಮ್ಮನಗಿ(24) ಎಂದು ಗುರುತಿಸಲಾಗಿದ್ದು, ಮೃತನ ತಂದೆ ತಾಯಿಯನ್ನು ಮೂಡಲಗಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹತ್ತು ದಿನಗಳ ಹಿಂದಷ್ಟೇ ವಿವಾಹವಾಗಿದ್ದ ಇಂದ್ರಜೀತ್ ಮತ್ತು ಕಲ್ಯಾಣಿ ಕುಟುಂಬದವರೊಂದಿಗೆ ಬದಾಮಿ ಬನಶಂಕರಿ ದೇವಿ ದರ್ಶನ ಪಡೆದು ಮರಳಿ ಮನೆಗೆ ತೆರಳುವಾಗ ಹಳ್ಳೂರ ಗ್ರಾಮದ ಗಾಂಧಿನಗರ ಬಳಿ ಸಕ್ಕರೆ ಕಾರ್ಖಾನೆಯ ಮಳ್ಳಿ ಸಾಗಿರುವ ಟ್ಯಾಂಕರ್ ಹಾಗೂ ಕಾರ್ ಮಧ್ಯೆ ಅವಘಡ ಸಂಭವಿಸಿದೆ.