ಮಂಗಳೂರು: ಸಿಟಿ ಬಸ್ಸುಗಳು ಇನ್ಮುಂದೆ ಸರ್ವಿಸ್ ಬಸ್ ನಿಲ್ದಾಣದಲ್ಲಿ ನಿಲುಗಡೆ

ಮಂಗಳೂರು: ಸ್ಮಾರ್ಟ್ ಸಿಟಿಯ ಟ್ರಾಫಿಕ್ ದಟ್ಟಣೆಯನ್ನು ನಿವಾರಿಸುವ ನಿಟ್ಟಿನಲ್ಲಿ ಸಿಟಿ ಬಸ್ಸುಗಳು ಇನ್ನು ಮುಂದೆ ಸರ್ವಿಸ್ ಬಸ್ ನಿಲ್ದಾಣಕ್ಕೆ ತೆರಳುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲ್‌ದೀಪ್. ಆರ್. ಜೈನ್ ಆದೇಶಿಸಿದ್ದಾರೆ.
ಇಂದಿನಿಂದ ಸಿಟಿ ಬಸ್ ನಿಲ್ದಾಣಕ್ಕೆ ಬಸ್‌ಗಳು ಬರುವುದಿಲ್ಲ, ಬದಲಾಗಿ ಪಕ್ಕದ ಸರ್ವಿಸ್ ಬಸ್ ನಿಲ್ದಾಣದಿಂದಲೇ ಹೊರಡಲಿವೆ. ಇದೇ ವೇಳೆ ಪೊಲೀಸ್ ಆಯುಕ್ತರ ಕಚೇರಿ ಎದುರಿನ ರಸ್ತೆಯಿಂದ (ಸರ್ವಿಸ್ ಬಸ್ ನಿಲ್ದಾಣ ಪಕ್ಕ) ಬಸ್ ಹೊರತುಪಡಿಸಿ ಇತರ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಪೊಲೀಸರ ಕ್ರಮದಿಂದ ಮೊದಲ ದಿನ ಪ್ರಯಾಣಿಕರು, ವಾಹನ ಚಾಲಕರಲ್ಲಿ ಗೊಂದಲ ಉಂಟಾಗಿದ್ದು ಪೊಲೀಸರು ಸ್ಥಳದಲ್ಲಿದ್ದು ಸೂಚನೆ ನೀಡಿದ್ದಾರೆ.