ಇಬ್ಬರು ಹುಡುಗಿಯರನ್ನು ಕೂರಿಸಿಕೊಂಡು ಬೈಕ್ ವೀಲಿಂಗ್; ದುಸ್ಸಾಹಸ ಮೇರೆದ ಯುವಕನ ವಿರುದ್ಧ FIR

ಮುಂಬಯಿ : ಬೈಕ್ ನಲ್ಲಿ ಇಬ್ಬರು ಹುಡುಗಿಯರನ್ನು ಕೂರಿಸಿಕೊಂಡು ವೀಲಿಂಗ್ ಮಾಡಿ ದುಸ್ಸಾಹಸ ಮೇರೆದ ಯುವಕನ ಹಿಂದೆ ಮುಂಬೈ ಪೋಲೀಸರು ಬಿದ್ದಿದ್ದಾರೆ.
ಮುಂಬೈಯ ರಸ್ತೆಯೊಂದರಲ್ಲಿ ಮಾಡಿದ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೂವರ ಮೇಲೆ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮುಂಬಯಿ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಬೈಕ್ ನಲ್ಲಿ ಇಬ್ಬರು ಹುಡುಗಿಯರನ್ನು ಕೂರಿಸಿಕೊಂಡು ಹೋಗಿದ್ದಾನೆ.
ಒಬ್ಬ ಯುವತಿ ಸವಾರನ ಕಡೆ ಮುಖ ಮಾಡಿ ಅಪ್ಪಿಕೊಂಡು ಕೂತಿದ್ದು, ಮತ್ತೊಂದು ಹುಡುಗಿ ಸವಾರನ ಹಿಂದೆ ಅಪ್ಪಿಕೊಂಡು ಕೂತಿದ್ದಾಳೆ.
ವೇಗವಾಗಿ ಹೋಗುತ್ತಾ ಬೈಕಿನಲ್ಲಿ ಒಂದು ಚಕ್ರವನ್ನು ಎತ್ತಿ ಹುಡುಗ ವೀಲಿಂಗ್ ಮಾಡಿ ಅಪಾಯಕಾರಿ ಸ್ಟಂಟ್ ಮಾಡಿದ್ದಾನೆ.
ಯಾರು ಈ 13 ಸೆಕೆಂಡ್ ಗಳ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಬಿಟ್ಟಿದ್ದು ಇದೀಗ ಇದರ ಜಾಡು ಹಿಡಿದ ಮುಂಬೈ ಪೊಲೀರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪೊಲೀಸರು ಮೂವರ ವಿರುದ್ಧ ಐಪಿಸಿಯ ಸೆಕ್ಷನ್ 279 (ಅತಿವೇಗದ ಚಾಲನೆ) ಮತ್ತು 336 (ಜೀವಕ್ಕೆ ಅಪಾಯ) ಮತ್ತು ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.